ಕರುಯಿಜಾವಾ, ಜಪಾನ್: ಉಕ್ರೇನ್‌ಗೆ ರಷ್ಯಾದ ಅಣುಬಾಂಬ್ ಬೆದರಿಕೆ, ಪ್ರತಿಸ್ಪರ್ಧಿ ತೈವಾನ್ ಸುತ್ತಲೂ ಚೀನಾದ ಯುದ್ಧದ ಮಿಲಿಟರಿ ಚಟುವಟಿಕೆ. ಉತ್ತರ ಕೊರಿಯಾದ ಅಭೂತಪೂರ್ವ ಕ್ಷಿಪಣಿ ಪರೀಕ್ಷೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಭಾನುವಾರದಂದು ಕರುಯಿಜಾವಾದಲ್ಲಿ ನಡೆದ ಜಿ7 ರಾಷ್ಟ್ರಗಳ ಸಭೆಯಲ್ಲಿ ಗಂಭೀರವಾಗಿ ಚರ್ಚೆಸಲಾಗಿದೆ.
ಭದ್ರತಾ ಮಂಡಳಿಯಲ್ಲಿ ರಷ್ಯಾ ಮತ್ತು ಚೀನಾದ ಹಸ್ತಕ್ಷೇಪದ ನಡುವೆ ವಿಶ್ವಸಂಸ್ಥೆ ದುರ್ಬಲಗೊಂಡಿದೆ. ಈ ನಡುವೆ G7 ನಂತಹ ಜಾಗತಿಕ ವೇದಿಕೆಗಳು ಇನ್ನಷ್ಟು ಪ್ರಾಮುಖ್ಯತೆ ಪಡೆದಿವೆ ಎಂದು ಕೆಲವರು ನಂಬುತ್ತಾರೆ. ಜಪಾನ್‌ನ ಕೀಯೊ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕ ಯುಯಿಚಿ ಹೊಸೋಯಾ ಅವರ ಪ್ರಕಾರ, ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ಮತ್ತು ಚೀನಾದಿಂದ ತೈವಾನ್ ಮೇಲಿನ ಸಂಭಾವ್ಯ ಆಕ್ರಮಣವನ್ನು ತಡೆಯಲು ಈ ವರ್ಷದ G7 ಸಭೆಗಳು ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಹೇಳಿದ್ದಾರೆ.
ಜಪಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಕೆನಡಾ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಸುಧಾರಿಸುವ ಮಾರ್ಗಗಳು ಮತ್ತು ಬಡ ದೇಶಗಳಿಗೆ ಮುಖ್ಯವಾದ ಸಮಸ್ಯೆಗಳನ್ನು ಚರ್ಚಿಸುವ ನಿರೀಕ್ಷೆಯಿದೆ.
ಉಕ್ರೇನ್‌ಗೆ ಅಣುಬಾಂಬ್ ಹೆದರಿಕೆ:ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪರಮಾಣು ಭೀತಿ ಎದುರಾಗಿದ್ದು, ಈ ವಿಷಯ G7 ಚರ್ಚೆಯಲ್ಲಿ ಪ್ರಮುಖವಾಗಿದೆ. ಯುದ್ಧದಲ್ಲಿ ಬಳಸಿದ ಮೊದಲ ಪರಮಾಣು ಬಾಂಬ್‌ನ ಗುರಿಯಾದ ಹಿರೋಷಿಮಾದಲ್ಲಿ ಮುಂದಿನ ತಿಂಗಳು ಶೃಂಗಸಭೆ ನಡೆಯಲಿದೆ. ಉಕ್ರೇನ್‌ನ ವಿರುದ್ಧ ಯುದ್ಧ ಗೆಲ್ಲಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಅಸ್ತ್ರ ಬಳಸಬಹುದು ಎಂಬ ಭಯದ ನಡುವೆ ಈ ವಿಷಯವು ಹೆಚ್ಚು ಪ್ರಮುಖವಾಗಿದೆ.
ಉಕ್ರೇನ್‌ನಲ್ಲಿ ರಷ್ಯಾದ ನಡೆಗಳ ಮೇಲೆ ಪ್ರಭಾವ ಬೀರುವ ಕೆಲವೇ ರಾಷ್ಟ್ರಗಳ ಪೈಕಿ ಚೀನಾವನ್ನು ಗಮನದಲ್ಲಿಡಲಾಗುತ್ತಿದೆ. ವಿಶ್ವದ ಎರಡು ದೊಡ್ಡ ನಿರಂಕುಶಾಧಿಕಾರಗಳ ನಡುವಿನ ವಿದೇಶಾಂಗ ನೀತಿಯ ಹೊಂದಾಣಿಕೆಯ ಬಗ್ಗೆ ಕರುಯಿಜಾವಾದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಗಮನಹರಿಸಲಾಗಿದೆ.
ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಸರ್ವಾಧಿಕಾರಿ ಪ್ರಚೋದನೆಗಳನ್ನು ಮುಂದುವರಿಸಲು ಹೆಚ್ಚು ಧೈರ್ಯಶಾಲಿಯಾಗಿದ್ದಾರೆ. ಇತ್ತೀಚೆಗೆ ಮಾಸ್ಕೋಗೆ ಪ್ರಯಾಣಿಸಿದ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುವ ಸಂಬಂಧ ಮಾತುಕತೆ ನಡೆಸಿದ್ದಾರೆ. ಉಕ್ರೇನ್‌ಗೆ ಈಗಾಗಲೇ ಗಣನೀಯವಾದ ಬೆಂಬಲವನ್ನು ಉತ್ತೇಜಿಸಲು ಜಪಾನ್ G7 ಅನ್ನು ಬಳಸಬಹುದು ಎಂದು ಕಾಂಡಾ ಯೂನಿವರ್ಸಿಟಿ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನ ಉಪನ್ಯಾಸಕ ಜೆಫ್ರಿ ಹಾಲ್ ಹೇಳಿದ್ದಾರೆ.