ನ್ಯೂಯಾರ್ಕ್:ಅಮೆರಿಕದಲ್ಲಿ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಕ ದೋಷದ ಹಿನ್ನೆಲೆಯಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಫೆಡರಲ್ ಏವಿಯೇಷನ್ ಆಡ್ಮಿನಿಸ್ಟ್ರೇಷನ್ನ ಕಂಪ್ಯೂಟರ್ಗಳಲ್ಲಿ ಕಂಡು ಬಂದ ದೋಷದಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಇಂದು ಮುಂಜಾನೆ 5:13 ರಿಂದ ಈ ಸಮಸ್ಯೆ ಎದುರಾಗಿದ್ದು, ಈ ಸಮಯದ ನಂತರ ನಾಗರಿಕ ವಿಮಾನಯಾನ ತಂತ್ರಾಂಶದಲ್ಲಿ ಯಾವುದೇ ಅಪ್ಡೇಟ್ಗಳು ಆಗಿಲ್ಲ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಫೆಡರಲ್ ಏವಿಯೇಷನ್ ಆಡ್ಮಿನಿಸ್ಟ್ರೇಷನ್ನ (ಎಫ್‌ಎಎ) ದೋಷದಿಂದಾಗಿ ಅಮೆರಿಕದಾದ್ಯಂತ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಎಫ್‌ಎಎನ ತಾಂತ್ರಿಕ ದೋಷದ ಹಿನ್ನೆಲೆ ಪೈಲಟ್‌ಗಳು ವಿಮಾನ ನಿಲ್ದಾಣದ ಸಂಪರ್ಕ ಸಮಸ್ಯೆ ಆಗಿದೆ. ಅಲ್ಲದೇ ವಿಮಾನ ನಿಲ್ದಾಣದ ಸೌಲಭ್ಯದ ಬಗ್ಗೆ ಮತ್ತು ಕಾರ್ಯ ವಿಧಾನದ ಬಗ್ಗೆ ಯಾವುದೇ ಮಾಹಿತಿ ಮುಂಜಾನೆಯಿಂದ ಲಭ್ಯವಾಗದ ಕಾರಣ ವಿಮಾನಯಾನ ಸ್ಥಗಿತಗೊಂಡಿದೆ.
ಸೈಬರ್ ದಾಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ವೈಟ್ ಹೌಸ್:ಶ್ವೇತಭವನ ನೀಡಿರುವ ಮಾಹಿತಿಯಂತೆ, ಸೈಬರ್ ದಾಳಿಯ ಯಾವುದೇ ಪುರಾವೆಗಳಿಲ್ಲ. ಅಧ್ಯಕ್ಷ ಜೋ ಬೈಡನ್ ಸಾರಿಗೆ ಕಾರ್ಯದರ್ಶಿ ಪೀಟ್ ಬುಟ್ಟಿಗೀಗ್ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಾರಿಗೆ ಕಾರ್ಯದರ್ಶಿ ಅವರಿಗೂ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿಲ್ಲ. ಸುಮಾರು 5,400ಕ್ಕೂ ಹೆಚ್ಚಿನ ವಿಮಾನ ಹಾರಾಟ ಮಾಡಿಲ್ಲ ಎಂಬ ಮಾಹಿತಿ ಇದೆ. ಸಾರಿಗೆ ಕಾರ್ಯದರ್ಶಿ ಎಫ್‌ಎಎ ಸಂಪರ್ಕದಲ್ಲಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನನಗೆ ಮಾಹಿತಿ ನೀಡಲು ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.
5,400ಕ್ಕೂ ಹೆಚ್ಚಿನ ವಿಮಾನಯಾನದಲ್ಲಿ ವ್ಯತ್ಯಯ:ಫ್ಲೈಟ್ ಅವರ್ ಫ್ಲೈಟ್ ಟ್ರ್ಯಾಕಿಂಗ್ ವೆಬ್ನ ಪ್ರಕಾರ, ಅಮೆರಿಕಕ್ಕೆ ಬರಬೇಕಿದ್ದ ಮತ್ತು ಅಮೆರಿಕಾದಿಂದ ಹೊರಡಬೇಕಿದ್ದ 5,400 ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ಫೆಡರಲ್ ಏವಿಯೇಷನ್ ಆಡ್ಮಿನಿಸ್ಟ್ರೇಷನ್ ತನ್ನ ನೊಟೀಸ್ ಟು ಏರ್ ಮಿಷನ್ಸ್ ಸಿಸ್ಟಮ್ (NOTAM) ಪುನರ್ ವ್ಯವಸ್ಥೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಟ್ವೀಟ್ ಮಾಡಿ ತಿಳಿಸಿದೆ. ರಾಷ್ಟ್ರೀಯ ವೈಮಾನಿಯ ಸಂಚಾರ ಸಂಪೂರ್ಣವಾಗಿ ಇದರಿಂದ ಹದಗೆಟ್ಟಿದೆ. ಎಫ್‌ಎಎ ವ್ಯವಸ್ಥೆಯನ್ನು ಮರು ಲೋಡ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಏರ್ ಮಿಷನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕಾದ ಹಿನ್ನೆಲೆ ವಿಮಾನ ಮತ್ತು ಸುರಕ್ಷತಾ ಮಾಹಿತಿಗಾಗಿ ಏಜೆನ್ಸಿಯ ಅನುಮತಿ ಇಲ್ಲದೇ 9 ಗಂಟೆಯ ವರೆಗೆ ದೇಶದಿಂದ ಯಾವುದೇ ವಿಮಾನ ಪ್ರಯಾಣ ಬೆಳೆಸುವಂತಿಲ್ಲ ಎಂದು ಎಫ್‌ಎಎ ಆದೇಶಿಸಿದೆ.