ಕರ್ನಾಟಕ

karnataka

ETV Bharat / international

ಸಮುದ್ರದಲ್ಲಿ ಟೈಟಾನಿಕ್​ ನೋಡಲು ತೆರಳಿದ್ದ ಐವರು ನಾಪತ್ತೆ.. ಭರದಿಂದ ಸಾಗಿದ ರಕ್ಷಣಾ ಕಾರ್ಯ

ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಮುಳುಗಿದ ಸ್ಥಳವನ್ನು ಪತ್ತೆ ಮಾಡಲಾಗಿದೆ. ಅಲ್ಲಿಂದ ಮತ್ತೊಮ್ಮೆ ದೊಡ್ಡ ಅಪಘಾತದ ಸುದ್ದಿ ಬರುತ್ತಿದೆ. ವಾಸ್ತವವಾಗಿ, ಟೈಟಾನಿಕ್ ಹಡಗಿನ ಅವಶೇಷಗಳಿಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ.

sea craft going to Titanic wreckage missing  Deep sea craft carrying 5 people missing  Titanic wreckage  Atlantic Ocean  OceanGates expeditions to the Titanic wreck site  ಸಮುದ್ರದಲ್ಲಿ ಟೈಟಾನಿಕ್​ ನೋಡಲು ತೆರಳಿದ್ದ ಐವರು ನಾಪತ್ತ  ಭರದಿಂದ ಸಾಗಿದ ರಕ್ಷಣಾ ಕಾರ್ಯ  ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಮುಳುಗಿದ ಸ್ಥಳ  ಟೈಟಾನಿಕ್ ಹಡಗು ಮುಳುಗಿದ ಸ್ಥಳವನ್ನು ಪತ್ತೆ  ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆ  ಟೈಟಾನಿಕ್ ತನ್ನ ಮೊದಲ ಸಮುದ್ರಯಾನ  ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ನ ದಾರುಣ ಅಂತ್ಯ  ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟ
ಸಮುದ್ರದಲ್ಲಿ ಟೈಟಾನಿಕ್​ ನೋಡಲು ತೆರಳಿದ್ದ ಐವರು ನಾಪತ್ತೆ

By

Published : Jun 20, 2023, 10:02 AM IST

ಬೋಸ್ಟನ್, ಅಮೆರಿಕ​: ಟೈಟಾನಿಕ್ ತನ್ನ ಮೊದಲ ಸಮುದ್ರಯಾನದಲ್ಲಿ ಅಪಘಾತಕ್ಕೀಡಾಗಿ ಮುಳುಗಿ ಹೋದ ಬೃಹತ್​ ಹಡಗು. 'ಮುಳುಗಲಾರದ ಹಡಗು' ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು. ಈ ಬೃಹತ್​ ಹಡಗು ಮುಳುಗಿ ವರ್ಷಗಳೇ ಕಳೆದರೂ ಇಂದಿಗೂ ಜನರು ಸಮುದ್ರದಲ್ಲಿರುವ ಟೈಟಾನಿಕ್ ಅನ್ನು ನೋಡಲು ತೆರಳುತ್ತಾರೆ. ಸಮುದ್ರದ ತಳದಲ್ಲಿ ಇರುವ ಈ ದೈತ್ಯ ಹಡಗಿನ ಅವಶೇಷಗಳನ್ನು ನೋಡಲು ಜನರು ಜಲಾಂತರ್ಗಾಮಿ ನೌಕೆಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಟೈಟಾನಿಕ್​ ನೋಡಲು ಹೋದ ಒಂದು ಜಲಾಂತರ್ಗಾಮಿ ಕಾಣೆಯಾಗಿದೆ.

ಟೈಟಾನಿಕ್ ಅವಶೇಷಗಳನ್ನು ನೋಡಲು ಜನರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ ಎಂದು ಬೋಸ್ಟನ್ ಕೋಸ್ಟ್‌ಗಾರ್ಡ್ ಅನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ನ್ಯೂಫೌಂಡ್‌ಲ್ಯಾಂಡ್‌ನ ಕರಾವಳಿಯಲ್ಲಿ ಜಲಾಂತರ್ಗಾಮಿ ನೌಕೆಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ವರದಿಗಳು ತಿಳಿಸಿವೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸಣ್ಣ ಜಲಾಂತರ್ಗಾಮಿ ನೌಕೆಗಳು ಕೆಲವೊಮ್ಮೆ ಪ್ರವಾಸಿಗರನ್ನು ಸಮುದ್ರದ ಮೇಲ್ಮೈಯಿಂದ 3,800 ಮೀಟರ್ ಕೆಳಗೆ ಇರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತವೆ. ಅದರಲ್ಲಿ ಒಂದು ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ. ನಾಪತ್ತೆಯಾಗಿರುವ ಜಲಂತರ್ಗಾಮಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಕಂಪನಿಗೆ ಸೇರಿದ್ದಾಗಿದೆ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

ಈ ಜಲಂತರ್ಗಾಮಿ ಒಂದು ಸಲಕ್ಕೆ ಐದು ಜನರನ್ನು ಹೊತ್ತೊಯ್ಯಬಲ್ಲದು. ಟೈಟಾನಿಕ್ ಹಡಗಿನ ಅವಶೇಷವನ್ನು ಪೂರ್ಣವಾಗಿ ನೋಡಲು ಸುಮಾರು ಎಂಟು ಗಂಟೆ ಬೇಕಾಗುತ್ತದೆ. ನಾಲ್ಕು ದಿನಗಳ ಆಮ್ಲಜನಕದ ಪೂರೈಕೆಯೊಂದಿಗೆ ನೀರಿನೊಳಗೆ ಧುಮುಕುವ ಸಬ್‌ಮರ್ಸಿಬಲ್, ಸಾಮಾನ್ಯವಾಗಿ ಪೈಲಟ್, 3 ಪೇಯಿಂಗ್ ಗೆಸ್ಟ್‌ಗಳನ್ನು ಒಯ್ಯುತ್ತದೆ. ಈಗ ನಾಪತ್ತೆಯಾಗಿರುವ ಜಲಂತರ್ಗಾಮಿಯಲ್ಲಿ ಸಿಬ್ಬಂದಿ ಸೇರಿ ಐವರು ಮಂದಿ ಪ್ರವಾಸಿಗರು ಇದ್ದರು ಎಂಬ ಮಾಹಿತಿ ಇದೆ.

ಏಪ್ರಿಲ್ 14, 1912 ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ನಂತರ ಟೈಟಾನಿಕ್ ಹಡಗು ಎರಡು ತುಂಡಾಗಿ ಸಮುದ್ರದಲ್ಲಿ ಮುಳುಗಿತ್ತು. ಟೈಟಾನಿಕ್ ಮುಳುಗುವಿಕೆಯಿಂದ 1500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಏಪ್ರಿಲ್ 10 ರಂದು ಈ ಹಡಗು ಬ್ರಿಟನ್‌ನ ಸೌತಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತ್ತು, ಅದು ಅಪಘಾತಕ್ಕೆ ಬಲಿಯಾಯಿತು.

ಆಳವಾದ ಸಮುದ್ರದಲ್ಲಿ ಟೈಟಾನಿಕ್​ ಅವಶೇಷಗಳನ್ನು 1985 ರಲ್ಲಿ ಕಂಡು ಹಿಡಿಯಲಾಯಿತು ಮತ್ತು ಅಂದಿನಿಂದ ಪರಿಣಿತರು ಪರಿಶೋಧಿಸುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಟೈಟಾನಿಕ್​ಗೆ ಭೇಟಿ ನೀಡಿದವರು ಹಡಗಿನ ಅವಶೇಷಗಳ 80 ನಿಮಿಷಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಹಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಕೂಡ ಟೈಟಾನಿಕ್ ಹಡಗು ದುರಂತದ ಬಗ್ಗೆ ಅದೇ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಟೈಟಾನಿಕ್ ಅಪಘಾತವನ್ನು ಬಹಳ ಹತ್ತಿರದಿಂದ ತೋರಿಸಲಾಗಿದೆ. ಈ ಚಿತ್ರ ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.

ಓದಿ:ಟೈಟಾನಿಕ್​ ಹೀರೋಯಿನ್​ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

For All Latest Updates

ABOUT THE AUTHOR

...view details