ವಾಷಿಂಗ್ಟನ್:ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ ಅನುಭವವನ್ನು ಗಮನದಲ್ಲಿಟ್ಟುಕೊಂಡುತೈವಾನ್ ಅನ್ನು ಯಶಸ್ವಿಯಾಗಿ ಆಕ್ರಮಿಸುವ ಚೀನಾದ ಸಾಮರ್ಥ್ಯದ ಬಗ್ಗೆ ಅದಕ್ಕೆ(ಚೀನಾ) ಅನುಮಾನಗಳಿವೆ ಎಂದು ಯುಎಸ್ ಕೇಂದ್ರೀಯ ಗುಪ್ತಚರ ಸಂಸ್ಥೆಯ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಹೇಳಿದ್ದಾರೆ. ಆದಾಗ್ಯೂ ದ್ವೀಪಕ್ಕೆ ಬೆದರಿಕೆ ಹಾಕುವುದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ ಎಂದು ಅವರು ಹೇಳಿದರು.
ಭಾನುವಾರ ಟೆಲಿವಿಷನ್ ಸಂದರ್ಶನವೊಂದರಲ್ಲಿ ಮಾತನಾಡಿದ ವಿಲಿಯಂ ಬರ್ನ್ಸ್ ತೈವಾನ್ ಅನ್ನು ವಶಪಡಿಸಿಕೊಳ್ಳುವ ಸಂಭವನೀಯ ಮಿಲಿಟರಿ ಸಾಮರ್ಥ್ಯದ ಬಗ್ಗೆ ಚೀನಾ ಅನಿಶ್ಚಿತವಾಗಿದೆ ಎಂದು ತೋರುತ್ತಿದೆ. ಆದಾಗ್ಯೂ, ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಅವರು ದ್ವೀಪವನ್ನು ಆಕ್ರಮಿಸಲು "2027 ರ ವೇಳೆಗೆ ಸಿದ್ಧರಾಗಿ" ದೇಶದ ಮಿಲಿಟರಿಗೆ ಸೂಚನೆ ನೀಡಿದ್ದಾರೆ ಎಂದು ಬರ್ನ್ಸ್ ಹೇಳಿದರು.
ಸಿಐಎ ಮುಖ್ಯಸ್ಥರು ಹೇಳಿದ್ದೇನು?: ಅಧ್ಯಕ್ಷ ಕ್ಸಿ ಅವರು 2027ರ ವೇಳೆಗೆ ತೈವಾನ್ ಅನ್ನು ಆಕ್ರಮಿಸಲು ಚೀನೀ ಮಿಲಿಟರಿ ನಾಯಕರಿಗೆ ಸಿದ್ಧರಾಗಿರಲು ಸೂಚಿಸಿದ್ದಾರೆ. ಆದರೆ ಅವರು 2027 ರಲ್ಲಿ ಅಥವಾ ಯಾವುದೇ ವರ್ಷದಲ್ಲಿ ಆಕ್ರಮಣ ಮಾಡಲು ನಿರ್ಧರಿಸಿದ್ದಾರೆ ಎಂದು ಅರ್ಥವಲ್ಲ. ನಮ್ಮ ತೀರ್ಪು ಕನಿಷ್ಠ ಪಕ್ಷ ಅಧ್ಯಕ್ಷ ಕ್ಸಿ ಮತ್ತು ಅವರ ಮಿಲಿಟರಿ ನಾಯಕತ್ವವು ಆ ಆಕ್ರಮಣವನ್ನು ಸಾಧಿಸಬಹುದೇ ಎಂಬ ಬಗ್ಗೆ ಅನುಮಾನಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಉಕ್ರೇನ್ ಆಕ್ರಮಣದ ಸಮಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹಿನ್ನಡೆಗಳು ಅನುಮಾನಗಳನ್ನು ಬಲಪಡಿಸಿದೆ ಎಂದು ಬರ್ನ್ಸ್ ಹೇಳಿದ್ದಾರೆ. ಆದಾಗ್ಯೂ ತೈವಾನ್ ನಿಯಂತ್ರಿಸಲು ಕ್ಸಿ ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.