ಕರ್ನಾಟಕ

karnataka

ETV Bharat / international

ಬ್ರೆಜಿಲ್​​ನಲ್ಲಿದ್ದಾರೆ 1.7 ಮಿಲಿಯನ್ ಬುಡಕಟ್ಟು ಜನರು: ಹಿಂದಿನ ಜನಗಣತಿಗಿಂತ ದುಪ್ಪಟ್ಟು ಏರಿಕೆ - Population in Brazil

2022 ರ ಜನಗಣತಿ ಪ್ರಕಾರ ಬ್ರೆಜಿಲ್‌ನಲ್ಲಿ 1.7 ಮಿಲಿಯನ್ ಬುಡಕಟ್ಟು ಜನರಿದ್ದಾರೆ ಎಂದು ತಿಳಿದು ಬಂದಿದೆ. 2010 ರ ಜನಗಣತಿಗಿಂತ ಈ ಬಾರಿ ದುಪ್ಪಟ್ಟು ಏರಿಕೆ ಕಂಡು ಬಂದಿದೆ.

brazil
ಬ್ರೆಜಿಲ್

By

Published : Aug 9, 2023, 10:38 AM IST

ರಿಯೊ ಡಿ ಜನೈರೊ (ಬ್ರೆಜಿಲ್) : ಬ್ರೆಜಿಲ್‌ನಲ್ಲಿ 1.7 ಮಿಲಿಯನ್ ಸ್ಥಳೀಯ ಜನರಿದ್ದಾರೆ ಎಂದು 2022 ರ ಜನಗಣತಿ ಅಂಕಿ - ಅಂಶಗಳು ತಿಳಿಸಿವೆ. (Brazilian Institute of Geography and Statistics) ಬ್ರೆಜಿಲಿಯನ್ ಭೂಗೋಳ ಮತ್ತು ಅಂಕಿ - ಅಂಶಗಳ ಸಂಸ್ಥೆ ಸೋಮವಾರ ಈ ಕುರಿತಾದ ಮಾಹಿತಿಯನ್ನು ಘೋಷಣೆ ಮಾಡಿದೆ. ಈ ಹಿಂದೆ ಈ ರಾಜ್ಯದಲ್ಲಿ ಇದ್ದವರಿಗಿಂತ ಈ ಬಾರಿ ಗಣತಿಯಲ್ಲಿ ಎರಡು ಪಟ್ಟು ಜನಸಂಖ್ಯೆ ಅಧಿಕವಾಗಿದೆ. 2010 ರಲ್ಲಿ ನಡೆದ ಸರ್ವೇಯಲ್ಲಿ ಸುಮಾರು 8,96,917 ಸ್ಥಳೀಯ ಜನರಿದ್ದರು ಎಂದು ಐಬಿಜಿಇ ತಿಳಿಸಿತ್ತು

ಬ್ರೆಜಿಲ್‌ನ ಅಮೆಜಾನ್‌ನಲ್ಲಿರುವ ಭವ್ಯವಾದ ವಸಾಹತುಶಾಹಿ ರಂಗಮಂದಿರದ ವೇದಿಕೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಸೋನಿಯಾ ಗುಜಜಾರಾ, "ರಾಷ್ಟ್ರೀಯ ಅಂಕಿ - ಅಂಶಗಳ ಸಂಸ್ಥೆ ಹೊಸದಾಗಿ ಬಿಡುಗಡೆಯಾದ ಜನಗಣತಿ ಡೇಟಾದ ಕುರಿತು ಮಾಹಿತಿ ನೀಡಿದರು. ರಾಷ್ಟ್ರದಲ್ಲಿ 1,693,535 ಮಂದಿ ಸ್ಥಳೀಯ ಜನರಿದ್ದಾರೆ. ಹೆಚ್ಚಿನ ಸ್ಥಳೀಯರು ಮುಂದೆ ಬಂದು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ" ಎಂದು ಹೇಳಿದರು.

ಅಮೆಜಾನ್ ಮತ್ತು ಅದರ ಕಾಡುಗಳನ್ನು ರಕ್ಷಿಸಲು ಗಡಿಯಾಚೆಗಿನ ಸಹಕಾರದ ಕುರಿತು ಚರ್ಚಿಸಲು ಈ ವಾರ ಪ್ರದೇಶದ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದೇನೆ. ಹೊಸ ಜನಸಂಖ್ಯೆಯ ಅಂಕಿ - ಅಂಶಗಳಿಂದ ಸ್ಥಳೀಯ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ಸೇವೆಗಳನ್ನು ಸರ್ಕಾರ ಘೋಷಿಸಲು ಮತ್ತು ಬಜೆಟ್​ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲು ಈ ಸರ್ವೆಯಿಂದ ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

ಬಳಿಕ ಮಾತನಾಡಿದ ಯೋಜನಾ ಸಚಿವ ಸಿಮೋನ್ ಟೆಬೆಟ್, "ಪೊಲೀಸರ ಬೆಂಬಲದೊಂದಿಗೆ ಹೆಲಿಕಾಪ್ಟರ್‌ಗಳಲ್ಲಿ ಪ್ರಯಾಣಿಸುವ ಮೂಲಕ ಜನಗಣತಿ ತಂಡಗಳು ಎಲ್ಲ ಹಳ್ಳಿಗಳಿಗೂ ಸಂಚರಿಸಿ ಜನರ ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿವೆ. ತುಂಬಾ ಅಪಾಯಕಾರಿಯಾದ ಹಳ್ಳಿಗಳನ್ನು ಸಹ ಈ ಬಾರಿಯ ಜನಗಣತಿಯಲ್ಲಿ ಕವರ್ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ :ಹಿಂದು ಸಂಪ್ರದಾಯಕ್ಕೆ ತಲೆಬಾಗಿದ ಬ್ರೆಜಿಲ್‌ ಭಕ್ತರು.. ಕಾಳಹಸ್ತೇಶ್ವರನಿಗೆ ವಿಶೇಷ ಪೂಜೆ

ಮೊದಲ ಬಾರಿಗೆ ಸ್ಥಳೀಯ ಜನಸಂಖ್ಯೆ ಅಂದರೆ ಮೂಲ ನಿವಾಸಿಗಳನ್ನು ಪತ್ತೆ ಹಚ್ಚಿ ಎಣಿಕೆ ಮಾಡಲು ಅಮೆಜಾನ್ ಮಳೆಕಾಡಿನ ದೂರದ ಹಳ್ಳಿಗಳಿಗೆ ಪ್ರಯಾಣಿಸಿದ ಜನಗಣತಿ ತಂಡಗಳು, ಹೊಸ ವಿಧಾನದ ಮೂಲಕ ಸರ್ವೆ ಕಾರ್ಯವನ್ನು ಮಾಡಿದ್ದರಿಂದಾಗಿ ಶೇ 88 ಜನಸಂಖ್ಯೆ ಹೆಚ್ಚಳವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :Population in India : ಭಾರತದ ಜನಸಂಖ್ಯೆ 139 ಕೋಟಿ ; ಈಗಲೂ ಚೀನಾಗಿಂತ ಕಡಿಮೆ

ಬ್ರೆಜಿಲ್‌ನ ಅರ್ಧದಷ್ಟು ಸ್ಥಳೀಯ ಸಮುದಾಯಗಳು ಅಮೆಜಾನ್ ಪ್ರದೇಶದಲ್ಲಿ ವಾಸಿಸುತ್ತಿವೆ. ವೆನೆಜುವೆಲಾದ ಗಡಿಯಲ್ಲಿರುವ ಯಾನೋಮಾಮಿಯು ಪ್ರದೇಶವು 27,152 ಜನರ ಜನಸಂಖ್ಯೆಯನ್ನು ಹೊಂದಿದೆ ಎಂದು ಬ್ರೆಜಿಲಿಯನ್ ಭೂಗೋಳ ಮತ್ತು ಅಂಕಿ - ಅಂಶಗಳ ಸಂಸ್ಥೆ ಹೇಳಿದೆ.

ಇದನ್ನೂ ಓದಿ :ಬ್ರೆಜಿಲ್‌ನಲ್ಲಿ ಭಾರಿ ಮಳೆ : ಭೂಕುಸಿತ, ಪ್ರವಾಹಕ್ಕೆ 19 ಮಂದಿ ಬಲಿ

ABOUT THE AUTHOR

...view details