ರೆಹೋಬೋತ್ ಬೀಚ್(ಯುಎಸ್):ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರ ಬೀಚ್ ಹೌಸ್ನ ನಿರ್ಬಂಧಿತ ವಾಯು ಪ್ರದೇಶಕ್ಕೆ ಶನಿವಾರ ಖಾಸಗಿ ವಿಮಾನವೊಂದು ಪ್ರವೇಶಿಸಿದ ಘಟನೆ ನಡೆದಿದೆ. ಹಾಗಾಗಿ ಬೈಡೆನ್ ಹಾಗೂ ಅವರ ಪತ್ನಿಯನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ.
ವಾಷಿಂಗ್ಟನ್ನಿಂದ ಪೂರ್ವಕ್ಕೆ 200 ಕಿಮೀ ದೂರದಲ್ಲಿರುವ ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿ ಜೋ ಬೈಡೆನ್ ಅವರ ನಿವಾಸದ ನಿರ್ಬಂಧಿತ ವಾಯು ಪ್ರದೇಶಕ್ಕೆ ವಿಮಾನ ಪ್ರವೇಶಿಸಿತ್ತು. ಅಧ್ಯಕ್ಷರು ಹಾಗೂ ಅವರ ಪತ್ನಿ ಮೇಲೆ ಯಾವುದೇ ದಾಳಿ ನಡೆದಿಲ್ಲ. ಅವರು ಸುರಕ್ಷಿತವಾಗಿದ್ದಾರೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ನಂತರ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರನ್ನು ಮರಳಿ ಬೀಚ್ ಹೌಸ್ಗೆ ಬಿಡಲಾಯಿತು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.