ನ್ಯೂಯಾರ್ಕ್: ''ಡೊನಾಲ್ಡ್ ಟ್ರಂಪ್ ಅವರು ಫೈನಾನ್ಸಿಯಲ್ ಸ್ಟೇಟಮೆಂಟ್ಸ್ನಲ್ಲಿ ಆಸ್ತಿಗಳ ಮೌಲ್ಯವನ್ನು ಹೆಚ್ಚು ತೋರಿಸಿ, ನೂರಾರು ಮಿಲಿಯನ್ ಡಾಲರ್‌ಗಳನ್ನು ಸಾಲದಲ್ಲಿ ಪಡೆದಿದ್ದಾರೆ. ಅದನ್ನು ನ್ಯಾಯಾಲಯವು ಕೂಡ ಮೋಸ ಎಂದು ಪರಿಗಣಿಸಿದೆ'' ಎಂದು ಮಾಜಿ ಅಧ್ಯಕ್ಷರ ನ್ಯೂಯಾರ್ಕ್ ಸಿವಿಲ್ ವಂಚನೆ ವಿಚಾರಣೆ ವೇಳೆ, ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು ಬುಧವಾರ ಸಾಕ್ಷ್ಯ ಹೇಳಿದ್ದಾರೆ.
''ಟ್ರಂಪ್ ಅವರ ಫೈನಾನ್ಸಿಯಲ್ ಸ್ಟೇಟಮೆಂಟ್ಸ್ ಮೂಲಕ ಫ್ಲೋರಿಡಾದ ಡೋರಲ್‌ನಲ್ಲಿರುವ ಅವರ ಗಾಲ್ಫ್ ರೆಸಾರ್ಟ್‌ಗಾಗಿ 2011ರಲ್ಲಿ 125 ಮಿಲಿಯನ್ ಡಾಲರ್ ಸಾಲಕ್ಕೆ ಮತ್ತು 2012 ರಲ್ಲಿ ಅವರ ಚಿಕಾಗೋ ಹೋಟೆಲ್ ಮತ್ತು ಕಾಂಡೋ ಗಗನಚುಂಬಿ ಕಟ್ಟಡಕ್ಕಾಗಿ 107 ಮಿಲಿಯನ್ ಡಾಲರ್ ಸಾಲಕ್ಕೆ ಅನುಮೋದನೆ ಪಡೆದಿದ್ದರು'' ಎಂದು ಮಾಜಿ ಡಾಯ್ಚ ಬ್ಯಾಂಕ್ ರಿಸ್ಕ್ ಮ್ಯಾನೇಜ್ಮೆಂಟ್ ಅಧಿಕಾರಿ ನಿಕೋಲಸ್ ಹೈ ಸಾಕ್ಷಿ ಹೇಳಿದ್ದಾರೆ.
''ಆದರೆ, ಟ್ರಂಪ್ ಅವರ ಆಸ್ತಿಗಳ ಬಗ್ಗೆ ಬ್ಯಾಂಕ್ ತನ್ನದೇ ಆದ ಸಂಪೂರ್ಣ ಮೌಲ್ಯಮಾಪನವನ್ನು ನಡೆಸದಿದ್ದರೂ, ಟ್ರಂಪ್ ಟವರ್ ಮತ್ತು ಗಾಲ್ಫ್ ಕೋರ್ಸ್‌ಗಳಂತಹ ಹಿಡುವಳಿಗಳು, ಅವರು ಪಡೆದ ಸಾಲಕ್ಕಿಂತಲೂ ಕಡಿಮೆ ಮೌಲ್ಯವನ್ನು ಹೊಂದಿದ್ದವು. ಟ್ರಂಪ್ ಅವರ ಫೈನಾನ್ಸಿಯಲ್ ಸ್ಟೇಟಮೆಂಟ್ಸ್ನಿಂದ ಕಡಿಮೆ ಬಡ್ಡಿದರಗಳ ಅಡಿ ದೊಡ್ಡ ಸಾಲಗಳನ್ನು ಪಡೆಯಲು ಸಹಾಯ ಮಾಡಿತು'' ಎಂದು ಹೈಗ್ ತಿಳಿಸಿದ್ದಾರೆ. ಹೈಗ್ ಅವರು 2008 ರಿಂದ 2018 ರವರೆಗೆ ಬ್ಯಾಂಕ್‌ನ ಖಾಸಗಿ ಸಂಪತ್ತು ನಿರ್ವಹಣಾ ಘಟಕದ ರಿಸ್ಕ್ ಗ್ರೂಪ್ನ ಮುಖ್ಯಸ್ಥರಾಗಿದ್ದರು..
ಈ ಹಿಂದೆ ಕೋರ್ಟ್ ನೀಡಿದ್ದ ತೀರ್ಪಿನಲ್ಲೇನಿದೆ?:ಮಾಜಿ ಅಧ್ಯಕ್ಷ ಮತ್ತು ಅವರ ಕಂಪನಿಯಾದ ಟ್ರಂಪ್ ಸಂಸ್ಥೆ, ಬ್ಯಾಂಕುಗಳು, ವಿಮಾದಾರರು ಹಾಗೂ ಇತರರಿಗೆ ಒಪ್ಪಂದಗಳನ್ನು ಮಾಡಲು ಮತ್ತು ಸಾಲಗಳನ್ನು ಪಡೆಯಲು ನೀಡಿದ ಫೈನಾನ್ಸಿಯಲ್ ಸ್ಟೇಟಮೆಂಟ್ಸ್ ಮೇಲೆ ಟ್ರಂಪ್ ಅವರ ಆಸ್ತಿ ಮತ್ತು ನಿವ್ವಳ ಮೌಲ್ಯದ ಮೌಲ್ಯವನ್ನು ಉತ್ಪ್ರೇಕ್ಷಿಸುವ ಮೂಲಕ ಹಲವು ವರ್ಷಗಳವರೆಗೆ ವಂಚನೆ ಮಾಡಿದ್ದಾರೆ ಎಂದು ಕಳೆದ ತಿಂಗಳು ನ್ಯಾಯಾಧೀಶರು ತೀರ್ಪು ನೀಡಿದ್ದರು.