ನವದೆಹಲಿ: ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ಏರ್ಲೈನ್ಸ್ ಇಂದು ಜರ್ಮನಿಯಿಂದ ಹೊರಡುವ ಮತ್ತು ಒಳಗೆ ಬರುವ ಬಹುತೇಕ ಎಲ್ಲ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಪೈಲಟ್ಗಳ ಮುಷ್ಕರದ ಕಾರಣದಿಂದ ಲುಫ್ತಾನ್ಸಾ ಈ ಕ್ರಮಕ್ಕೆ ಮುಂದಾಗಿದೆ. ಸೆಪ್ಟೆಂಬರ್ 2 ರಂದು ಲುಫ್ತಾನ್ಸಾ 800 ವಿಮಾನಯಾನಗಳನ್ನು ರದ್ದುಗೊಳಿಸಿದ್ದು, ಇದರಿಂದ ಸುಮಾರು 1 ಲಕ್ಷ 30 ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲುಫ್ತಾನ್ಸಾ ಏರ್ಲೈನ್ಸ್ ಪೈಲಟ್ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು
ಲುಫ್ತಾನ್ಸಾ ಏರ್ಲೈನ್ಸ್ ಪೈಲಟ್ಗಳು ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಕಂಪನಿಯ ಸುಮಾರು 800 ವಿಮಾನ ಸಂಚಾರಗಳು ರದ್ದಾಗಿವೆ.
ವೇತನ ಹೆಚ್ಚಳ ಕುರಿತಂತೆ ಕಂಪನಿಯೊಂದಿಗೆ ನಡೆದ ಮಾತುಕತೆಗಳು ವಿಫಲವಾದ ನಂತರ ಲುಫ್ತಾನ್ಸಾ ಏರ್ಲೈನ್ಸ್ ಮತ್ತು ಲುಫ್ತಾನ್ಸಾ ಕಾರ್ಗೊ ಪೈಲಟ್ಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಮುಷ್ಕರವು ಶುಕ್ರವಾರ ಬೆಳಗ್ಗೆ 00:01ಕ್ಕೆ ಆರಂಭವಾಗಿ ರಾತ್ರಿ 23:59ಕ್ಕೆ ಮುಗಿಯಲಿದೆ. ವಿಮಾನಯಾನ ಸಂಚಾರದಲ್ಲಿನ ವ್ಯತ್ಯಯವು ಶನಿವಾರ ಹಾಗೂ ಭಾನುವಾರದವರೆಗೂ ಮುಂದುವರಿಯಬಹುದು ಎಂದು ಕಂಪನಿ ತಿಳಿಸಿದೆ.
ಪೈಲಟ್ಗಳ ವೇತನವನ್ನು ಪ್ರತಿ ತಿಂಗಳಿಗೆ 900 ಯೂರೋ ಹೆಚ್ಚಿಸುವ ಅತ್ಯುತ್ತಮ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿತ್ತು. ಆದರೂ ಈ ಆಫರ್ ಒಪ್ಪಿಕೊಳ್ಳದ ಪೈಲಟ್ಗಳ ಕ್ರಮದ ಬಗ್ಗೆ ಕಂಪನಿ ವಿಷಾದ ವ್ಯಕ್ತಪಡಿಸಿದೆ. ಈ ವರ್ಷಾಂತ್ಯಕ್ಕೆ ಶೇ 5.5 ರಷ್ಟು ವೇತನ ಹೆಚ್ಚಳ, ಹಣದುಬ್ಬರಕ್ಕೆ ಸ್ವಯಂಚಾಲಿತ ಪರಿಹಾರ ಮತ್ತು ಸ್ಯಾಲರಿ ಗ್ರಿಡ್ ಹೊಂದಾಣಿಕೆ ಈ ಬೇಡಿಕೆಗಳನ್ನು ಮುಂದಿಟ್ಟು ಪೈಲಟ್ಗಳು ಮುಷ್ಕರ ನಡೆಸುತ್ತಿದ್ದಾರೆ.