ಪೋರ್ಟ್-ಔ-ಪ್ರಿನ್ಸ್: ದೇಶದ ದಕ್ಷಿಣ ಭಾಗದಲ್ಲಿರುವ ಜಾಕ್ಮೆಲ್ ಕಮ್ಯೂನ್‌ಗೆ ತೆರಳುತ್ತಿದ್ದ ಸೆಸ್ನಾ-207 ವಿಮಾನವು ತುರ್ತು ಭೂಸ್ಪರ್ಶ ಮಾಡಲು ಪ್ರಯತ್ನಿಸುವಾಗ ರೂಟ್ ಡೆಸ್ ರೈಲ್ಸ್ ಮಾರ್ಗಗಳಲ್ಲಿ ಚಾಲನೆ ಮಾಡುತ್ತಿದ್ದ ಒಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.
ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲು ಸೂಕ್ತ ಸ್ಥಳವನ್ನು ನೋಡಿದ್ದಾರೆ. ಆದ್ರೆ ಅವರಿಗೆ ಸೂಕ್ತ ಸ್ಥಳ ದೊರೆಯದೇ ಹಿನ್ನೆಲೆ ರಸ್ತೆಯ ಮೇಲೆ ವಿಮಾನ ನಿಲ್ಲಿಸಲು ಯತ್ನಿಸಿದ್ದಾರೆ.
ಓದಿ:ಸೇನಾ ಹೆಲಿಕಾಪ್ಟರ್ ಪತನ: 8 ಯುಎನ್ ಶಾಂತಿಪಾಲಕರಲ್ಲಿ 6 ಪಾಕಿಸ್ತಾನಿ ಸೇನಾ ಸೈನಿಕರು ಸಾವು!
ಜೆಟ್ ವಿಮಾನ ತುರ್ತು ಭೂಸ್ಪರ್ಶ ಮಾಡಲು ಯತ್ನಿಸುತ್ತಿರುವಾಗ ರಸ್ತೆ ಮೇಲಿರುವ ಚಲಿಸುತ್ತಿರುವ ಸೋಡಾ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು, ವಿಮಾನ ನಜ್ಜುಗುಜ್ಜಾಗಿ ಬಿದ್ದಿದೆ. ಈ ಅಪಘಾತದಲ್ಲಿ ಪೈಲಟ್ ಸೇರಿದಂತೆ ಆರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಅಲ್ಲಿದ್ದ ಪೊಲೀಸರಿಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯ ಕೈಗೊಂಡರು.
ನಾನು ಅಪಘಾತದ ಬಗ್ಗೆ ತೀವ್ರ ದುಃಖಿತನಾಗಿದ್ದೇನೆ ಮತ್ತು ಮೃತ ಸಂಬಂಧಿಕರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಪ್ರಧಾನಿ ಏರಿಯಲ್ ಹೆನ್ರಿ ಹೇಳಿದ್ದಾರೆ.