ಕರ್ನಾಟಕ

karnataka

ETV Bharat / international

ಮೆಕ್ಸಿಕೋ ಸಂಸತ್ತಿನಲ್ಲಿ 1,800 ವರ್ಷಗಳಷ್ಟು ಹಳೆಯ ಅನ್ಯಗ್ರಹ ಜೀವಿಗಳ ಪಳೆಯುಳಿಕೆ ಪ್ರದರ್ಶನ

ಮೆಕ್ಸಿಕೋ ಸಂಸತ್ತಿನಲ್ಲಿ ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನದ್ದು ಎನ್ನಲಾದ ಎರಡು ಅನ್ಯಗ್ರಹ ಜೀವಿಗಳ ರಕ್ಷಿತ ಪಳೆಯುಳಿಕೆಗಳನ್ನು ಪ್ರದರ್ಶಿಸಲಾಗಿದೆ.

ಅನ್ಯಗ್ರಹ ಜೀವಿಗಳ ರಕ್ಷಿತ ಶವ ಪ್ರದರ್ಶನ

By ETV Bharat Karnataka Team

Published : Sep 14, 2023, 1:21 PM IST

ಮೆಕ್ಸಿಕೋ:ಅನ್ಯಗ್ರಹ ಜೀವಿಯ ಅಸ್ತಿತ್ವದ ಕುರಿತು ಇನ್ನೂ ಸಾಕಷ್ಟು ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇದೆ. ಈ ಹಿಂದೆ, ಎಷ್ಟೋ ಜನರಿಗೆ ಏಲಿಯನ್​ನಂತಹ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡಿರುವ ಕುರಿತು ಸುದ್ದಿಗಳು ಹರಿದಾಡಿದ್ದವು. ಆದರೆ ಈ ಕುರಿತು ಇಲ್ಲಿಯವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ 1,800 ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗಿರುವ 'ಮಾನವೇತರ' ಅನ್ಯಗ್ರಹ ಜೀವಿಗಳ ಎರಡು ರಕ್ಷಿತ ಪಳೆಯುಳಿಕೆಗಳನ್ನು ಮಂಗಳವಾರ UFO ತಜ್ಞರು (Unidentified flying object- ಗುರುತಿಸಲಾಗದ ಹಾರುವ ವಸ್ತು) ಮೆಕ್ಸಿಕೋ ಸಂಸತ್ತಿನಲ್ಲಿ ಪ್ರದರ್ಶಿಸಿದ್ದಾರೆ.

ಸುರಕ್ಷಿತವಾಗಿರಿಸಿದ್ದ ಈ ಪಳೆಯುಳಿಕೆಗಳ ರಚನೆ ಮಾನವರ ದೇಹದ ಆಕಾರವನ್ನೇ ಹೋಲುತ್ತಿದೆ. ಎರಡು ಕೈಗಳನ್ನು ಹೊಂದಿದೆ. ಆದರೆ ಕೈಗಳಲ್ಲಿ ಕೇವಲ ಮೂರು ಬೆರಳುಗಳಷ್ಟೇ ಇವೆ. ಹಿಂಭಾಗದ ತಲೆಯ ಆಕಾರ ಉದ್ದವಿದೆ. ಈ ಕಳೇಬರವನ್ನು ಪ್ರದರ್ಶಿಸುವ ಮೂಲಕ ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ಅಂಗೀಕರಿಸಿದ ವಿಶ್ವದ ಮೊದಲ ದೇಶವಾಗಿ ಮೆಕ್ಸಿಕೊ ಹೊರಹೊಮ್ಮಿದೆ. ನಿಗೂಢ ಆವಿಷ್ಕಾರಗಳ ಕುರಿತು ನಡೆಯುತ್ತಿದ್ದ ಸಂಶೋಧನೆಯ ಸಮಯದಲ್ಲಿ ಅನ್ಯಗ್ರಹ ಜೀವಿ ಎನ್ನಲಾಗಿದ್ದ 2 ಸಂರಕ್ಷಿತ ಶವಗಳನ್ನು ಎರಡು ಮರದ ಪೆಟ್ಟಿಗೆಯಲ್ಲಿಟ್ಟು ಸಂಸತ್ತಿನಲ್ಲಿ ಪ್ರದರ್ಶಿಸಲಾಯಿತು.

ಅಮೆರಿಕದ ನೌಕಾಪಡೆಯ ಮಾಜಿ ಪೈಲಟ್ ರಿಯಾನ್ ಗ್ರೇವ್ಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 700 ರಿಂದ 1,800 ವರ್ಷಗಳಷ್ಟು ಹಳೆಯದಾದ ಶವಗಳಿವು. ಈ ಮಾದರಿಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ. UFO ಅಥವಾ ಹಾರುವ ತಟ್ಟೆಗಳ ಅವಶೇಷಗಳ ನಂತರ ಕಂಡುಬಂದ ಜೀವಿಗಳೂ ಅಲ್ಲ. ಇವು ಡಯಾಟಮ್ (ಪಾಚಿ) ಆವರಿಸಿದ್ದ ಗಣಿಗಳಲ್ಲಿ ಕಂಡುಬಂದಿವೆ. ಆ ನಂತರ ಪಳೆಯುಳಿಕೆಗೊಳಿಸಲಾಯಿತು ಎಂದು ಜೈಮ್​ ಮೌಸ್ಸಾನ್ ಮಾಹಿತಿ ನೀಡಿದ್ದಾರೆ.

ಇದನ್ನು ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಠ ರೂಪದಲ್ಲಿ ಇವುಗಳನ್ನು ಪ್ರಸ್ತುತಪಡಿಸಲಾಗಿದೆ. ನಮ್ಮ ಜಗತ್ತಿನಲ್ಲಿ ಯಾವುದೇ ಇತರ ಜಾತಿಗಳಿಗೆ ಸಂಬಂಧಿಸಿದ ಮಾನವರಲ್ಲದ ಮಾದರಿಗಳೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ ಎಂಬುದಕ್ಕೆ ಸ್ಪಷ್ಟವಾದ ಪುರಾವೆಯಾಗಬಲ್ಲದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಶವಗಳ ಡಿಎನ್​ಎ ಪರೀಕ್ಷೆ ನಡೆಸಲಾಗಿದೆ. ಇವುಗಳ ಎಕ್ಸ್​​ರೇ ಅನ್ನು ಕೂಡಾ ಮೆಕ್ಸಿಕೋ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿತ್ತು. ಎಕ್ಸ್​ರೇ ಅಪರೂಪದ ಲೋಹದ ಇಂಪ್ಲಾಂಟ್‌ಗಳೊಂದಿಗೆ ದೇಹದೊಳಗೆ 'ಮೊಟ್ಟೆಗಳು' ಇರುವುದನ್ನು ತೋರಿಸಿದೆ. 2017ರಲ್ಲಿ ಪೆರುವಿನ ಕುಸ್ಕೋದಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ:ಲಿಬಿಯಾ ಪ್ರವಾಹ: ಡೆರ್ನಾ ನಗರದಲ್ಲಿ 5300ಕ್ಕೂ ಹೆಚ್ಚು ಮಂದಿ ಸಾವು, 30 ಸಾವಿರ ಜನ ನಿರಾಶ್ರಿತ

ABOUT THE AUTHOR

...view details