ಕರ್ನಾಟಕ

karnataka

By

Published : Jan 8, 2021, 4:52 PM IST

ETV Bharat / international

ವಿಡಿಯೋ: ಮೊದಲ ಕೋವಿಡ್‌ ಲಸಿಕೆ ಪಡೆದು ಮಾದರಿಯಾದ ಸಿಂಗಾಪುರ್​ ಪ್ರಧಾನಿ!

ಸಿಂಗಾಪುರ ಪ್ರಧಾನಿ ಲೀ ಹ್ಸೀನ್​ ಲೂಂಗ್​ ಇಂದು ಕೋವಿಡ್​ ಚುಚ್ಚುಮದ್ದು ಪಡೆದುಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

Singapore PM
Singapore PM

ವಿಡಿಯೋ: ಮೊದಲ ಕೋವಿಡ್‌ ಲಸಿಕೆ ಪಡೆದು ಮಾದರಿಯಾದ ಸಿಂಗಾಪುರ್​ ಪ್ರಧಾನಿ!

ಸಿಂಗಾಪುರ​:ಜಗತ್ತುಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದು ಈಗಾಗಲೇ ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೀಗ ಸಿಂಗಾಪುರ​ ಪ್ರಧಾನಿ ತನ್ನ ದೇಶದಲ್ಲಿ ಮೊದಲ ವ್ಯಾಕ್ಸಿನ್ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

ಕೋವಿಡ್​ ವ್ಯಾಕ್ಸಿನ್​ ಮೊದಲ ಚುಚ್ಚುಮದ್ದು ಸ್ವೀಕರಿಸಿದ ಸಿಂಗಾಪುರ​ ಪ್ರಧಾನಿ!

ಓದಿ:ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಪ್ರಧಾನಿ ಲೀ ಹ್ಸೀನ್ ಲೂಂಗ್​ ಶುಕ್ರವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ವ್ಯಾಕ್ಸಿನ್​​ ಫೈಜರ್ ಚುಚ್ಚುಮದ್ದು ತೆಗೆದುಕೊಂಡಿದ್ದಾರೆ. ಇದರ ಜತೆಗೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅನೇಕರಿಗೆ ಈಗಾಗಲೇ ವ್ಯಾಕ್ಸಿನ್​ ನೀಡುವ ಕಾರ್ಯ ಆರಂಭಗೊಂಡಿದೆ.

ಲಸಿಕೆ ಪಡೆದುಕೊಂಡ ಮೇಲೆ ಮಾತನಾಡಿರುವ ಪ್ರಧಾನಿ, ಚುಚ್ಚುಮದ್ದು ನೋವುರಹಿತವಾಗಿದ್ದು, ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ. ಲಸಿಕೆ ಪಡೆದುಕೊಳ್ಳುವುದರಿಂದ ಕೊರೊನಾದಿಂದ ನಾವು ಹೊರಬರುತ್ತೇವೆ ಎಂಬ ನಂಬಿಕೆ ನನಗಿದೆ. ಸಿಂಗಪುರದಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಇದೇ ವೇಳೆ ಅವರು ಅಭಯ ನೀಡಿದರು.

ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಅನುಮೋದನೆ ನೀಡಿದೆ. ಭಾರತದಲ್ಲೂ ಈಗಾಗಲೇ ಎರಡು ಲಸಿಕೆಗಳ ತುರ್ತು ಬಳಕೆಗೆ ಅವಕಾಶ ನೀಡಲಾಗಿದ್ದು, ಪ್ರಧಾನಿ ಮೋದಿ ಮೊದಲ ಲಸಿಕೆ ಪಡೆದುಕೊಳ್ಳಬೇಕು ಎಂಬ ಮಾತುಗಳನ್ನು ವಿರೋಧ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ.

ABOUT THE AUTHOR

...view details