ಜೆರುಸೆಲೇಂ:ಕೊರೊನಾ ಹಾವಳಿ ಬೆನ್ನಲ್ಲೇ ಭಾರತ ಸರ್ಕಾರ ಮಾಸ್ಕ್ ಹಾಗೂ ವೈದ್ಯಕೀಯ ಔಷಧಗಳ ಕಚ್ಚಾ ವಸ್ತುಗಳ ರಪ್ತಿನ ಮೇಲೆ ನಿಷೇಧ ವಿಧಿಸಿತ್ತು.
ಪ್ಲೀಸ್... ಮಾಸ್ಕ್, ಪ್ಯಾರ್ಮಾಸ್ಯುಟಿಕಲ್ಸ್ ರಪ್ತಿಗೆ ನಿರ್ಬಂಧ ಬೇಡ... ಇದು ಇವರ ವಿನಂತಿ - ನರೇಂದ್ರ ಮೋದಿ
ಭಾರತ ಸರ್ಕಾರ ಮಾಸ್ಕ್ ಹಾಗೂ ವೈದ್ಯಕೀಯ ಔಷಧಗಳ ಕಚ್ಚಾ ವಸ್ತುಗಳ ರಪ್ತಿನ ಮೇಲೆ ನಿಷೇಧ ವಿಧಿಸಿದ್ದ ಹಿನ್ನೆಲೆ ಇದನ್ನೆ ಅವಲಂಬಿಸಿರುವ ರಾಷ್ಟ್ರಗಳು ಮಾಸ್ಕ್ ಹಾಗೂ ಫಾರ್ಮಾಸ್ಯುಟಿಕಲ್ಸ್ಕಚ್ಚಾ ವಸ್ತುಗಳ ಮೇಲಿನ ರಪ್ತು ನಿಷೇಧವನ್ನ ತೆಗೆಯುವಂತೆ ಮನವಿ ಮಾಡಿದ್ದಾರೆ.
ಹೀಗಾಗಿ ಈ ರಪ್ತನ್ನೇ ನೆಚ್ಚಿಕೊಂಡಿರುವ ರಾಷ್ಟ್ರಗಳು ಕಂಗಾಲಾಗಿವೆ. ಇದರಲ್ಲಿ ಇಸ್ರೇಲ್ ಸಹ ಹೊರತಾಗಿಲ್ಲ. ರಪ್ತು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹು, ಪ್ರಧಾನಿ ಮೋದಿ ಅವರಿಗೆ ವಿಶೇಷ ಮನವಿ ಮಾಡಿದ್ದು, ಮಾಸ್ಕ್ ಹಾಗೂ ಫಾರ್ಮಾಸ್ಯುಟಿಕಲ್ಸ್ಕಚ್ಚಾ ವಸ್ತುಗಳ ಮೇಲಿನ ರಪ್ತು ನಿಷೇಧವನ್ನ ತೆಗೆಯುವಂತೆ ಮನವಿ ಮಾಡಿದ್ದಾರೆ.
ನಾನು ಈ ಬಗ್ಗೆ ಭಾರತದ ಪ್ರಧಾನಿ ಹಾಗೂ ಸ್ನೇಹಿತ ನರೇಂದ್ರ ಮೋದಿ ಜತೆ ಮಾತನಾಡಿದ್ದೇನೆ. ನಾವು ಈ ವಸ್ತುಗಳಿಗೆ ಹಲವು ದೇಶಗಳನ್ನ ಅವಲಂಬಿಸಿದ್ದೇವೆ. ನಾವು ಯಾವಾಗಲೂ ಅವರತ್ತ ನೋಡುತ್ತಿರುತ್ತೇವೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.