ಟೋಕಿಯೋ(ಜಪಾನ್): ಜಪಾನ್ ಪ್ರಧಾನಿಯಾಗಿದ್ದ ಯೋಶಿಹಿದ್ ಸುಗಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣ ಇದೀಗ ಹೊಸ ಪ್ರಧಾನಿ ಆಯ್ಕೆ ಮಾಡಲಾಗಿದ್ದು, ಅಲ್ಲಿನ ಮಾಜಿ ವಿದೇಶಾಂಗ ಸಚಿವರಿಗೆ ಮಣೆ ಹಾಕಲಾಗಿದೆ. ಇಂದು ಬೆಳಗ್ಗೆ ಸಂಸತ್ನಲ್ಲಿ ಆಡಳಿತರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ, ಮಾಜಿ ವಿದೇಶಾಂಗ ಸಚಿವರಾಗಿದ್ದ ಫುಮಿಯೋ ಕಿಶಿದಾ ಅವರನ್ನ ಆಯ್ಕೆ ಮಾಡಿದೆ.
ಜಪಾನ್ ಸಂಸತ್ನಲ್ಲಿ ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸದಸ್ಯರು ಒಮ್ಮತದಿಂದ ಇವರ ಹೆಸರು ಅಂತಿಮಗೊಳಿಸಿದ್ದಾರೆ. ಈ ಹಿಂದೆ ಜಪಾನ್ ಪ್ರಧಾನಿಯಾಗಿದ್ದ ಯೋಶಿಹಿದ್ ಸುಗಾ ಅವರು ಜಪಾನ್ನಲ್ಲಿ ಕೊರೊನಾ ನಿಯಂತ್ರಣ ಹಾಗೂ ಒಲಿಂಪಿಕ್ಸ್ ಆಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕೇವಲ ಒಂದೇ ವರ್ಷದಲ್ಲಿ ಅವರು ಪದತ್ಯಾಗ ಮಾಡಿದ್ದಾರೆ.
ಹೊಸ ಪ್ರಧಾನಿಗೆ ಸವಾಲುಗಳ ಮೇಲೆ ಸವಾಲು