ಟೆಲ್ ಅವಿವ್/ಇಸ್ರೇಲ್: ಗಾಜಾ ಪ್ರದೇಶದ ಪ್ಯಾಲೇಸ್ಟಿನಿಯನ್ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್ ವಾಯುಪಡೆ ದಕ್ಷಿಣ ಗಾಜಾ ಪ್ರದೇಶದ ಖಾನ್ ಯೂನಿಸ್ ಪ್ರದೇಶದಲ್ಲಿ ದಾಳಿ ನಡೆಸಿತು.
ಆ್ಯರಾಸನ್ ಬಲೂನ್ಸ್ ಉಡಾವಣೆಗೆ ಪ್ರತಿಕಾರ: ಹಮಾಸ್ ಮೇಲೆ ಇಸ್ರೇಲ್ ದಾಳಿ - ಇಸ್ರೇಲ್ ದಾಳಿ
ಆ್ಯರಾಸನ್ ಬಲೂನ್ಸ್ ಉಡಾವಣೆಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ ಮಿಲಿಟರಿ ತಾಣಗಳ ಮೇಲೆ ದಾಳಿ ಮಾಡಿದೆ.
ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನ ಉಡಾಯಿಸಿದ್ದಕ್ಕೆ ಪ್ರತೀಕಾರವಾಗಿ ಹಮಾಸ್ ಮಿಲಿಟರಿ ನೆಲೆ ಗುರಿಯಾಗಿಸಿಕೊಂಡು ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ. ಈ ನೆಲೆ ಗಾಜಾದ ನಾಗರಿಕ ತಾಣಗಳ ಬಳಿ ಇತ್ತು. ಇದರಲ್ಲಿ ಒಂದು ಶಾಲೆ ಸೇರಿದೆ. ಗಾಜಾದ ಭಯೋತ್ಪಾದಕ ಪ್ರಯತ್ನಗಳಿಗೆ ನಾವು ಪ್ರತ್ಯುತ್ತರ ಹಾಗೂ ಪ್ರತೀಕಾರ ಮುಂದುವರಿಸುತ್ತೇವೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಟ್ವೀಟ್ ಮಾಡಿದೆ.
ಗಾಜಾ ಪಟ್ಟಿಯಿಂದ ದಕ್ಷಿಣ ಇಸ್ರೇಲ್ ಗುರಿಯಾಗಿಸಿಕೊಂಡು ಹಮಾಸ್ ನಿನ್ನೆ ಆ್ಯರಾಸನ್ ಬಲೂನ್ಗಳನ್ನು ಉಡಾಯಿಸಿತ್ತು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಭಾನುವಾರ ರಾತ್ರಿ ಮುಂದಿನ ಸೂಚನೆ ಬರುವವರೆಗೂ ಗಾಜಾ ಪ್ರದೇಶದ ಮೀನುಗಾರಿಕೆ ವಲಯವನ್ನು ಅರ್ಧದಷ್ಟು ನಿಷೇಧಿಸಿ ಆದೇಶ ಹೊರಡಿಸಿದೆ.