ಬಾಗ್ದಾದ್(ಇರಾಕ್):ಇಸ್ಲಾಮಿಕ್ ಸ್ಟೇಟ್ (IS) ಭಯೋತ್ಪಾದಕ ಸಂಘಟನೆಗೆ ಸೇರಿದ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 11 ನಾಗರಿಕರು ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ಬಾಗ್ದಾದ್ನ ಈಶಾನ್ಯದಲ್ಲಿರುವ ಗ್ರಾಮದಲ್ಲಿ ನಡೆದಿದೆ.
ಶಿಯಾ ಸಮುದಾಯದ ಜನರೇ ಹೆಚ್ಚಾಗಿರುವ ದಿಯಾಲಾ ಪ್ರಾಂತ್ಯದ ಬಕೌಬಾ ನಗರದ ಈಶಾನ್ಯ ಭಾಗಕ್ಕಿರುವ ಅಲ್-ರಶಾದ್ ಗ್ರಾಮದಲ್ಲಿ ಈ ದಾಳಿ ನಡೆದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಸ್ಥರ ಅಪಹರಣ:ಅಸೋಸಿಯೇಟೆಡ್ ಪ್ರೆಸ್(AP) ಪ್ರಕಾರ, ಇಬ್ಬರು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸದಸ್ಯರು ಆ ಗ್ರಾಮದ ಇಬ್ಬರನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಆದರೆ ಗ್ರಾಮಸ್ಥರು ಬೇಡಿಕೆ ಈಡೇರಿಸದೇ ಇದ್ದಾಗ ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ. ದಾಳಿಗೆ ಮಷಿನ್ ಗನ್ ಬಳಸಲಾಗಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರು ಮತ್ತು ಗಾಯಗೊಂಡವರೆಲ್ಲಾ ನಾಗರಿಕರೇ ಆಗಿದ್ದಾರೆ.