ಇಸ್ರೇಲ್ :ಭಾರತದ ಇಸ್ರೇಲ್ ರಾಯಭಾರಿ ಡಾ. ರಾನ್ ಮಲ್ಕಾ ಅವರು ಕೊರೊನಾ ವೈರಸ್ಗೆ ಚಿಕಿತ್ಸೆ ನೀಡಲು ಆ್ಯಂಟಿಬಾಡಿಯೊಂದು ಇಸ್ರೇಲ್ನಲ್ಲಿ ತಯಾರಾಗುತ್ತಿದೆ. ಈ ಪ್ರಯೋಗವು ಸುಧಾರಿತ ಹಂತದಲ್ಲಿದ್ದು, ಇದು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ.
ಕೋವಿಡ್-19 ವಿರುದ್ಧದ ಪ್ರತಿಕಾಯಗಳ ಪ್ರಯೋಗ ಸುಧಾರಿತ ಹಂತದಲ್ಲಿದೆ.. ಡಾ. ರಾನ್ ಮಲ್ಕಾ
ಕೊರೊನಾ ವೈರಸ್ಗೆ ಚಿಕಿತ್ಸೆ ನೀಡಲು ಆ್ಯಂಟಿಬಾಡಿ ಒಂದು ಇಸ್ರೇಲ್ನಲ್ಲಿ ತಯಾರಾಗುತ್ತಿದ್ದು, ಈ ಪ್ರಯೋಗವು ಸುಧಾರಿತ ಹಂತದಲ್ಲಿದೆ ಎಂದು ಭಾರತದ ಇಸ್ರೇಲ್ ರಾಯಭಾರಿ ಡಾ. ರಾನ್ ಮಲ್ಕಾ ಹೇಳಿದ್ದಾರೆ
ron malka
ಈ ಪ್ರಯೋಗದ ನಿಖರವಾದ ಹಂತ ಹಾಗೂ ಇದು ಕೋವಿಡ್-19 ತಡೆಗಟ್ಟುವಲ್ಲಿ ಲಸಿಕೆಯಾಗಿ ಬಳಸಲು ಎಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದಾರೆ.
"ಭಾರತ ಹಾಗೂ ಇಸ್ರೇಲ್ನ ವಿಜ್ಞಾನಿಗಳು ಮತ್ತು ವೃತ್ತಿಪರರು ಒಟ್ಟಾಗಿ ಕೆಲಸ ಮಾಡಿ, ಈ ಆ್ಯಂಟಿಬಾಡಿ ಕೋವಿಡ್-19ಗೆ ಹೇಗೆ ಲಸಿಕೆಯಾಗಿ ಉಪಯೋಗವಾಗಲಿದೆ ಎಂದು ಪ್ರಯೋಗ ನಡೆಸುತ್ತಿದ್ದಾರೆ" ಎಂದು ಡಾ. ರಾನ್ ಮಲ್ಕಾ ಹೇಳಿದ್ದಾರೆ.