ಕರ್ನಾಟಕ

karnataka

ETV Bharat / international

ಟೆಹ್ರಾನ್‌ನ ಉತ್ತರ ಪರ್ವತ ಪ್ರದೇಶದಲ್ಲಿ ಹಿಮಪಾತ: 12 ಮೃತದೇಹಗಳು ಪತ್ತೆ

ಡಿಸೆಂಬರ್ 25ರಂದು ಟೆಹ್ರಾನ್​ನ ಕೋಲಚಲ್, ಅಹರ್ ಮತ್ತು ದಾರಾಬಾದ್ ಜಿಲ್ಲೆಗಳಲ್ಲಿ ಹಿಮಪಾತದ ಮೂರು ಪ್ರತ್ಯೇಕ ಘಟನೆಗಳು ಸಂಭವಿಸಿದ ಬಳಿಕ ದೊಡ್ಡ ಮಟ್ಟದ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

12 bodies found on Iran mountains after blizzard
ಟೆಹ್ರಾನ್‌ನ ಉತ್ತರ ಪರ್ವತ ಪ್ರದೇಶದಲ್ಲಿ ಹಿಮಪಾತ

By

Published : Dec 28, 2020, 4:31 PM IST

ಟೆಹ್ರಾನ್:ಇರಾನ್ ರಾಜಧಾನಿ ಟೆಹ್ರಾನ್‌ನ ಉತ್ತರ ಪರ್ವತ ಪ್ರದೇಶದಲ್ಲಿ ಹಿಮಪಾತ ಸಂಭವಿಸಿದ ಬಳಿಕ 12 ಪರ್ವತಾರೋಹಿಗಳ ಮೃತದೇಹಗಳು ಪತ್ತೆಯಾಗಿವೆ ಎಂದು ರಕ್ಷಣಾ ತಂಡ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.

ಡಿಸೆಂಬರ್ 25ರಂದು ಕೋಲಚಲ್, ಅಹರ್ ಮತ್ತು ದಾರಾಬಾದ್ ಜಿಲ್ಲೆಗಳಲ್ಲಿ ಹಿಮಪಾತದ ಮೂರು ಪ್ರತ್ಯೇಕ ಘಟನೆಗಳು ಸಂಭವಿಸಿದ ಬಳಿಕ ದೊಡ್ಡ ಮಟ್ಟದ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಓದಿ : ಸುಲೇಮಾನಿ ಹತ್ಯೆಗೈದ ಅಮೆರಿಕದ ಶಂಕಿತ ಹಂತಕರ ಪಟ್ಟಿಗೆ ಮತ್ತೆ ಮೂವರನ್ನು ಸೇರಿಸಿದ ಇರಾನ್​​

ಮೂರು ದಿನಗಳ ಹುಡುಕಾಟದ ನಂತರ ಟೆಹ್ರಾನ್‌ನ ರೆಡ್ ಕ್ರೆಸೆಂಟ್ ಭಾನುವಾರ ಕಾರ್ಯಾಚರಣೆ ನಿಲ್ಲಿಸಿದ್ದು, ರಾಜಧಾನಿಯ ಉತ್ತರ ಪರ್ವತ ಪ್ರದೇಶದಲ್ಲಿ ಸಿಲುಕಿದ್ದ 14 ಜನರನ್ನು ರಕ್ಷಿಸಿ 12 ಶವಗಳನ್ನು ಹೊರ ತೆಗೆದಿದೆ. ಕೋಲಚಲ್ ಜಿಲ್ಲೆಯ ಪೊಲೀಸರು 12ನೇ ಶವವನ್ನು ಪತ್ತೆ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ತಸ್ನೀಮ್ ಹೇಳಿದೆ.

ABOUT THE AUTHOR

...view details