ಕೀವ್, ಉಕ್ರೇನ್ :ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಉಕ್ರೇನ್ನ ಮೆಲಿಟೋಪೋಲ್ ಮೇಯರ್ ಅನ್ನು ರಷ್ಯಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಆ ಜಾಗದಲ್ಲಿ ಹೊಸ ಮೇಯರ್ ಅನ್ನು ರಷ್ಯಾ ನೇಮಿಸಿದೆ.
ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಉಕ್ರೇನ್ನ ಚುನಾಯಿತ ಮೇಯರ್ ಅನ್ನು ಬಿಡುಗಡೆ ಮಾಡಲು ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಇಸ್ರೇಲ್ ಸಹಾಯವನ್ನು ಯಾಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಝೆಲೆನ್ಸ್ಕಿ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರೊಂದಿಗೆ ಮಾತುಕತೆ ಮುಂದುವರೆದಿದೆ. ರಷ್ಯಾದ ಆಕ್ರಮಣಶೀಲತೆ ಮತ್ತು ಶಾಂತಿಯ ಕುರಿತು ನಾವು ಮಾತನಾಡಿದ್ದೇವೆ. ಉಕ್ರೇನ್ ನಾಗರಿಕರ ವಿರುದ್ಧದ ದಬ್ಬಾಳಿಕೆಯನ್ನು ನಿಲ್ಲಿಸಬೇಕೆಂದು, ಮೆಲಿಟೋಪೋಲ್ನ ಮೇಯರ್ ಬಿಡುಗಡೆಗೆ ಈ ವೇಳೆ ಸಹಾಯ ಕೇಳಲಾಯಿತು ಎಂದಿದ್ದಾರೆ.