ಹೇಗ್(ನೆದರ್ಲೆಂಡ್ಸ್):ರಷ್ಯಾ ತನ್ನ ಮೇಲೆ ಯೋಜಿಸಿದ ನರಮೇಧ ಆಕ್ರಮಣ ಯೋಜನೆಯನ್ನು ತಡೆಯಬೇಕು. ಈವರೆಗೂ ಆದ ಹಾನಿಯ ನಷ್ಟವನ್ನು ಭರಿಸುವಂತೆ ಆ ದೇಶಕ್ಕೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಉಕ್ರೇನ್, ರಷ್ಯಾ ವಿರುದ್ಧ ದೂರು ದಾಖಲಿಸಿದೆ.
ಫೆಬ್ರವರಿ 24ರಿಂದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ರಷ್ಯಾಗೆ ಆದೇಶಿಸಬೇಕು. ಪೂರ್ವ ಉಕ್ರೇನ್‌ನ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಸುಳ್ಳು ಮಾಹಿತಿ ನೀಡಿ ತನ್ನ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ. ಈಗ ದೇಶದಲ್ಲಿ ನರಮೇಧವನ್ನು ನಡೆಸಲು ರಷ್ಯಾ ಯೋಜಿಸಿದೆ. ಇದನ್ನು ತಕ್ಷಣವೇ ನಿಲ್ಲಿಸಲು ಸೂಚಿಸಿ ಎಂದು ಐಸಿಜೆಗೆ ಸಲ್ಲಿಸಿದ ದೂರಿನಲ್ಲಿ ಉಕ್ರೇನ್ ಕೋರಿದೆ.