ಕೀವ್(ಉಕ್ರೇನ್):ಹತ್ತು ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಮಾಹಿತಿ ನೀಡಿದ್ದಾರೆ. ರಷ್ಯಾಗೆ ಸೇರಿದ ಸುಮಾರು 269 ಟ್ಯಾಂಕ್‌ಗಳು, 945 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 105 ಫಿರಂಗಿಗಳು, 50 ಎಂಎಲ್ಆರ್ಎಸ್ (Multiple Launch Rocket System), 39 ವಿಮಾನಗಳು, 40 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು UNIAN ವರದಿ ಮಾಡಿದೆ.
ರಷ್ಯಾ ಪಡೆಗಳು ಈಗಾಗಲೇ ನಿರುತ್ಸಾಹಗೊಂಡಿವೆ. ರಷ್ಯಾದ ಸೈನಿಕರು ಮತ್ತು ಅಧಿಕಾರಿಗಳಲ್ಲಿ ಕೆಲವರು ಶರಣಾಗುತ್ತಿದ್ದಾರೆ. ಇನ್ನೂ ಕೆಲವರು ಉಕ್ರೇನ್ ನೆಲದಲ್ಲಿ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಸ್ಪಷ್ಟನೆ ನೀಡಿದ್ದಾರೆ. ಉಕ್ರೇನಿಯನ್ ಪಡೆಗಳು ಮಾತ್ರವಲ್ಲದೇ ಉಕ್ರೇನ್ನ ಸಾಮಾನ್ಯ ಜನರೂ ನಿರಾಯುಧರಾಗಿದ್ದರೂ ರಷ್ಯಾ ಪಡೆಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ರಷ್ಯಾ ಸೈನಿಕರಿಗೆ ಈ ಮೂಲಕ ಮಾನಸಿಕವಾಗಿಯೂ ಪೆಟ್ಟು ನೀಡಲಾಗಿದೆ ಎಂದಿದ್ದಾರೆ.