ಕರ್ನಾಟಕ

karnataka

ETV Bharat / international

ಕೊರೊನಾಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂಗ್ಲೆಂಡ್​​​​​ನಲ್ಲಿ ಗೌರವ ಸಲ್ಲಿಕೆ - ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್

ಕೊರೊನಾದಿಂದ ಮೃತಪಟ್ಟ ರಾಷ್ಟ್ರೀಯ ಆರೋಗ್ಯ ಸೇವೆ ಮತ್ತು ಇತರ ಪ್ರಮುಖ ಅಧಿಕಾರಿಗಳಿಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗೌರವ ಸಲ್ಲಿಸಿದ್ರು. ಇಲ್ಲಿಯವರೆಗೆ 82 ಎನ್‌ಎಚ್‌ಎಸ್ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಕೊರೊನಾ ಹೋರಾಟ
ಕೊರೊನಾ ಹೋರಾಟ

By

Published : Apr 28, 2020, 11:44 PM IST

ಲಂಡನ್: ಕೊರೊನಾ ವೈರಸ್​ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ನೂರಾರು ಆರೋಗ್ಯ ಸಿಬ್ಬಂದಿ ಮತ್ತು ಇತರ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂಗ್ಲೆಂಡ್​​ನಲ್ಲಿ ಮಂಗಳವಾರ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಮತ್ತು ಇತರ ಪ್ರಮುಖ ಕಾರ್ಯಕರ್ತರಿಗೆ ಸ್ಥಳೀಯ ಸಮಯ ಬೆಳಗ್ಗೆ 11:00 ಗಂಟೆಗೆ (ಇಂಡಿಯಾ ಸಮಯದ ಪ್ರಕಾರ 3:30) ಗೌರವ ಸಲ್ಲಿಸಲಾಯಿತು.

ಇಲ್ಲಿಯವರೆಗೆ 82 ಎನ್‌ಎಚ್‌ಎಸ್ ಸಿಬ್ಬಂದಿ ಕೊರೊನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಕೊರೊನಾ ವೈರಸ್​ನಿಂದ ಪ್ರಾಣ ಕಳೆದುಕೊಂಡವರಿಗೆಲ್ಲ ಗೌರವ ಸಲ್ಲಿಸಲು ಎನ್​ಎಚ್​ಎಸ್​ ಕುಟುಂಬವೂ ಒಗ್ಗೂಡಲಿದೆ ಎಂದು ಇಸ್ಸಾರ್​​ ಹೇಳಿದರು.

ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದ ಸಾರ್ವಜನಿಕ ವಲಯದ ಆರೋಗ್ಯ ಅಧಿಕಾರಿಗಳ ಕುಟುಂಬಗಳಿಗೆ 60,000 ಪೌಂಡ್​​ ಲೈಫ್​ ಅಶ್ಯೂರೆನ್ಸ್​ ಯೋಜನೆಯೊಂದಿಗೆ, ಹೊಸ ಟೈಮ್​​-ಬಾಂಡ್​​ ವಿಮಾ ಯೋಜನೆಯನ್ನು ಘೋಷಿಸುವುದರೊಂದಿಗೆ ಗೌರವ ಸಲ್ಲಿಸಲಾಯಿತು.

ABOUT THE AUTHOR

...view details