ಕೀವ್:ಉಕ್ರೇನ್ ಮೇಲೆ ಯುದ್ಧದಾಹಿ ರಷ್ಯಾ ಭೀಕರ ದಾಳಿ ಮುಂದುವರಿಸಿದೆ. ರಷ್ಯಾದ ಎರಡು ಕ್ಷಿಪಣಿಗಳು ಉಕ್ರೇನ್ನ ರಾಜಧಾನಿ ಕೀವ್ನಲ್ಲಿನ ವಸತಿ ಸಮುಚ್ಚಯಗಳ ಮೇಲೆ ರಾಕೆಟ್ ದಾಳಿ ನಡೆಸಿವೆ.
ಒಂದು ಕ್ಷಿಪಣಿಯು ಜುಲ್ಯಾನಿ ವಿಮಾನ ನಿಲ್ದಾಣದ ಸಮೀಪವಿರುವ ಪ್ರದೇಶದಲ್ಲಿ ಸ್ಫೋಟಗೊಂಡರೆ, ಇನ್ನೊಂದು ಕ್ಷಿಪಣಿ ಸೆವಾಸ್ಟೊಪೋಲ್ ಚೌಕದ ಸಮೀಪವಿರುವ ಪ್ರದೇಶವನ್ನು ಧ್ವಂಸ ಮಾಡಿದೆ. ಉಕ್ರೇನ್ನ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಹೇಳುತ್ತಲೇ ರಷ್ಯಾ ಪ್ರಮುಖ ನಗರಗಳ ಮೇಲೂ ಕ್ಷಿಪಣಿ ದಾಳಿ ಮಾಡುತ್ತಿದೆ.