ಬಾರ್ಸಿಲೋನಾ: ಪ್ಲಾಸ್ಟಿಕ್ನ ರಕ್ಷಣಾತ್ಮಕ ಪರದೆಗಳೊಂದಿಗೆ ಸ್ಪೇನ್‌ನ ಬಾರ್ಸಿಲೋನಾದ ನರ್ಸಿಂಗ್ ಹೋಮ್ಗಳಲ್ಲಿ ರೋಗಿಗಳನ್ನು ಸಂಬಂಧಿಕರು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ.
ನರ್ಸಿಂಗ್ ಹೋಮ್ನಲ್ಲಿ ಪ್ಲಾಸ್ಟಿಕ್ ಪರದೆ ಮೂಲಕ ಒಂದಾದ ದಂಪತಿ ಸ್ಪೇನ್‌ನ 84 ವರ್ಷದ ವ್ಯಕ್ತಿಯೊಬ್ಬರು ಸುಮಾರು 102 ದಿನಗಳ ಕಾಲ ತಮ್ಮ ಪತ್ನಿಯಿಂದ ಬೇರ್ಪಟ್ಟಿದ್ದರು. ಬಳಿಕ ಅವರು ಪ್ಲಾಸ್ಟಿಕ್ನ ಪರದೆಯ ಸಹಾಯದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡು ಹತ್ತಿರದಿಂದ ಮಾತನಾಡಿದ್ದಾರೆ.
ನರ್ಸಿಂಗ್ ಹೋಮ್ನಲ್ಲಿ ಪ್ಲಾಸ್ಟಿಕ್ ಪರದೆ ಮೂಲಕ ಒಂದಾದ ದಂಪತಿ ಪ್ಯಾಸ್ಚುವಲ್ ಪೆರೆಜ್ ಅವರು ಬಾರ್ಸಿಲೋನಾದ ಒಂದು ನರ್ಸಿಂಗ್ ಹೋಮ್ನಲ್ಲಿ ವಾಸಿಸುತ್ತಿದ್ದರು. ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಅವರು ಅಲ್ಲೇ ಉಳಿಯಬೇಕಾಯಿತು. ಅಲ್ಲದೇ ಕೊರೊನಾ ಅನೇಕ ಹಿರಿಯ ಜೀವಗಳನ್ನು ಸ್ಪೇನ್ನಲ್ಲಿ ಬಲಿತೆಗೆದುಕೊಂಡಿದೆ. ದಂಪತಿಗಳು ಅವರ 59 ವರ್ಷಗಳ ದಾಂಪತ್ಯ ಜೀವನದಲ್ಲಿ ಇಷ್ಟು ದಿನ ದೂರವಿರಲಿಲ್ಲವಂತೆ.
ನರ್ಸಿಂಗ್ ಹೋಮ್ನಲ್ಲಿ ಪ್ಲಾಸ್ಟಿಕ್ ಪರದೆ ಮೂಲಕ ಒಂದಾದ ದಂಪತಿ ಬಾಲೆಸೋಲ್ ಪುಯಿಗ್ ಐ ಫ್ಯಾಬ್ರಾ ನರ್ಸಿಂಗ್ ಹೋಮ್ ರಕ್ಷಣಾತ್ಮಕ ಪರದೆಗಳ ಮೂಲಕ ಭೇಟಿಗೆ ಅವಕಾಶ ಮಾಡಿಕೊಟ್ಟಾಗ, ಆಗಮಿಸಿದವರಲ್ಲಿ ಕ್ಯಾಸಮೆರೊ ಮೊದಲಿಗರು. ಪತಿ ಮತ್ತು ಹೆಂಡತಿ ಪ್ಲಾಸ್ಟಿಕ್ನ ತೆಳುವಾದ ಪದರದ ಮೂಲಕ ನಿಮಿಷಗಳ ಕಾಲ ಒಬ್ಬರನ್ನೊಬ್ಬರು ಹತ್ತಿರದಿಂದ ತಬ್ಬಿಕೊಂಡು ಮಾತನಾಡಿದರು.