ಲಂಡನ್: ಲಂಡನ್ನಲ್ಲಿ ಸೆರೆಯಾಗಿರುವ ಬಹುಕೋಟಿ ರೂಪಾಯಿ ವಂಚಕ, ವಜ್ರದ ವ್ಯಾಪಾರಿ ನೀರವ್ ಮೋದಿ ಸರೆಯಾಗಲು ಇನ್ನೂ ಐದು ದಿನಗಳ ಸಮಯ ಇತ್ತು. ಆದರೂ, ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಅರೆಸ್ಟ್ ಆಗಿದ್ದು ಹೇಗೆ ಎಂಬುದು ಬಯಲಾಗಿದೆ.
ಮೂಲಗಳ ಪ್ರಕಾರ ಮಾರ್ಚ್ 25ರಂದು ನೀರವ್ ಮೋದಿಅವರನ್ನು ಬಂಧಿಸಬೇಕೆಂದು ವಾರೆಂಟ್ನಲ್ಲಿ ನಮೂದಿಸಿಲಾಗಿತ್ತು. ಆದರೆ, ಅದಕ್ಕೂ ಮುನ್ನ ಅವರು ಪೊಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಲಂಡನ್ನಲ್ಲಿ ಬ್ಯಾಂಕ್ ಖಾತೆ ಹೊಂದಬೇಕೆಂಬ ಅವರ ಆತುರ ಎನ್ನಲಾಗುತ್ತಿದೆ.