ರೋಮ್: ಸಂಪೂರ್ಣ ಲಾಕ್ಡೌನ್ ಆಗಿರುವ ಇಟಲಿ, ಕೋವಿಡ್-19ಗೆ ತತ್ತರಿಸಿ ಹೋಗಿದೆ. ದೇಶದಲ್ಲಿ ಫೆ.21 ರಂದು ಮೊದಲ ಪ್ರಕರಣ ಪತ್ತೆಯಾಗಿದ್ದು, ಇದೀಗ ಎರಡು ತಿಂಗಳಲ್ಲಿ ಸೋಂಕಿತರ ಸಂಖ್ಯೆ 1,87,327ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾಗೆ 25,085 ಮಂದಿ ಬಲಿಯಾಗಿದ್ದಾರೆ.
ಆದರೆ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಆ್ಯಕ್ಟಿವ್ ಕೇಸ್ಗಳ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು, ಗುಣಮುಖರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬುಧವಾರ ಒಂದೇ ದಿನ 2,943 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದು, ಗುಣಮುಖರ ಸಂಖ್ಯೆ 54,543ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳ ಪೈಕಿ 1,07,699 ಕೇಸ್ಗಳು ಆ್ಯಕ್ಟಿವ್ ಇವೆ. ಇವುಗಳಲ್ಲಿ 2,384 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದು (ICU), 23,805 ಆಸ್ಪತ್ರೆಯ ಜನರಲ್ ವಾರ್ಡ್ಗಳಲ್ಲಿದ್ದಾರೆ. ಉಳಿದ ಶೇ.75.7 ರಷ್ಟು ಸೋಂಕಿತರು ಮನೆಗಳಲ್ಲಿ ಐಸೋಲೇಷನ್ನಲ್ಲಿದ್ದಾರೆ.