ಕರ್ನಾಟಕ

karnataka

ETV Bharat / international

ಆರ್ಥಿಕತೆ ಮೇಲೆ ಕೊರೊನಾ ಪೆಟ್ಟು ತಗ್ಗಿಸಬೇಕು: ಚೇತರಿಕೆಗೆ ಯುರೋಪಿಯನ್​ ಒಕ್ಕೂಟದ ಕ್ರಮ - ಯುರೋಪಿಯನ್ ಒಕ್ಕೂಟ

ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಕೊರೊನಾ ವೈರಸ್​ನ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡವಂತೆ ಆದಷ್ಟು ಬೇಗ ಯೋಜನೆ ರೂಪುಗೊಳಿಸಲು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ.

video conference
ವಿಡಿಯೋ ಕಾನ್ಫರೆನ್ಸ್ ಮೂಲಕ​​ ಶೃಂಗಸಭೆ

By

Published : Jun 20, 2020, 9:25 AM IST

ಬ್ರಸೆಲ್ಸ್ (ಬೆಲ್ಜಿಯಂ): ಕೊರೊನಾ ವೈರಸ್ ಹಿನ್ನೆಲೆ ಆರ್ಥಿಕತೆ ಧ್ವಂಸಗೊಳ್ಳುತ್ತಿರುವುದರಿಂದ, ಭವಿಷ್ಯದ ದೀರ್ಘಕಾಲೀನ ಬಜೆಟ್ ಮತ್ತು ಬಹುಕೋಟಿ ಕೊರೊನಾ ಚೇತರಿಕೆ ಯೋಜನೆ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎಂದು ಯುರೋಪಿಯನ್ ಒಕ್ಕೂಟದ ನಾಯಕರು ತಿಳಿದುಕೊಂಡಿದ್ದಾರೆ.

ನಾಲ್ಕು ಗಂಟೆಗಳ ವಿಡಿಯೊ ಶೃಂಗಸಭೆಯ ಬಳಿಕ, ಭಿನ್ನಾಭಿಪ್ರಾಯಗಳ ನಡುವೆಯೂ ಈ ವಿಷಯದ ಕುರಿತು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತ್ವರಿತ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ.

"ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವುದು ಅತ್ಯಗತ್ಯ" ಎಂದು ಒಕ್ಕೂಟದ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಹೇಳಿದ್ದಾರೆ.

ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಕೊರೊನಾ ವೈರಸ್​ನ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡವಂತೆ ಆದಷ್ಟು ಬೇಗ ಯೋಜನೆ ರೂಪುಗೊಳಿಸಲು ನಿರ್ಧರಿಸಲಾಗಿದೆ.

ABOUT THE AUTHOR

...view details