ಕೊಲಂಬೊ: ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿನ ಬಾಂಬ್ ದಾಳಿಯಿಂದಾಗಿ ನೂರಾರು ಸಾವು-ನೋವುಗಳಾಗಿವೆ. ಆದರೆ, ಈ ಭೀಕರ ದಾಳಿಯ ಸುಳಿವು ಮೊದಲೇ ಸಿಕ್ಕಿತ್ತಂತೆ.ಹತ್ತು ದಿನದ ಹಿಂದೆಯೇ ಅಲ್ಲಿನ ಪೊಲೀಸ್ ಮುಖ್ಯಸ್ಥರೊಬ್ಬರು ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಉಗ್ರರು ದಾಳಿ ನಡೆಸುವ ಸುಳಿವು ಮೊದಲೇ ಸಿಕ್ಕಿತ್ತೆ? 10 ದಿನದ ಹಿಂದೆ ಪೊಲೀಸ್ ಮುಖ್ಯಸ್ಥರು ಹೇಳಿದ್ದೇನು? - bomb attack
ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯ ಕುರಿತು ಪೊಲೀಸ್ ಮುಖ್ಯಸ್ಥರೊಬ್ಬರು ಹತ್ತು ದಿನದ ಹಿಂದೆಯೇ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಉಗ್ರರ ದಾಳಿ
ಪೊಲೀಸ್ ಮುಖ್ಯಸ್ಥ ಪುಜುಥ್ ಜಯಸುಂದರ್ ಅವರು ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಏಪ್ರಿಲ್ 11 ರಂದು ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದರು. ಜೊತೆಗೆ ಚರ್ಚ್ ಹಾಗೂ ಕೊಲಂಬೊದಲ್ಲಿರುವ ಭಾರತದ ರಾಯಭಾರಿ ಕಚೇರಿ ಮೇಲೆ ಎನ್ಟಿಜೆ ಸಂಘಟನೆಯ ಬಾಂಬ್ ದಾಳಿ ಮಾಡುವ ಸಾಧ್ಯತೆ ಇದ್ದು, ಅಲರ್ಟ್ ಆಗಿರುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.ಕೊಲಂಬೊದಲ್ಲಿ ಇಂದು ನಡೆದ ಬಾಂಬ್ ಸ್ಫೋಟದಲ್ಲಿ 207 ಜನ ದುರ್ಮರಣ ಹೊಂದಿದ್ದು, 450 ಜನ ಗಾಯಗೊಂಡಿದ್ದಾರೆ.