ಸಿಂಗಾಪುರ: ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಅವರು ಇಂದು ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸಿದ್ದಾರೆ. ಸಂಸತ್ತಿನಲ್ಲಿ ನಗರ-ರಾಜ್ಯದಲ್ಲಿ ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸಬೇಕು ಎಂದು ವಾದಿಸುತ್ತಿರುವಾಗ ನೆಹರು ಅವರ ಬಗ್ಗೆ ಉಲ್ಲೇಖವಾಗಿದೆ.
ಪ್ರತಿಪಕ್ಷ 'ವರ್ಕರ್ಸ್ ಪಾರ್ಟಿ'ಯ ಮಾಜಿ ಸಂಸದೆ ರಯೀಸ್ ಖಾನ್ ವಿರುದ್ಧ ಸಂಸತ್ತಿನಲ್ಲಿ ಸುಳ್ಳು ಹೇಳಿದ ವಿಚಾರವಾಗಿ ಮಾತನಾಡುತ್ತಾ ಲೀ ಸೀನ್ ಲೂಂಗಾ ಅವರು ನೆಹರೂ ಹಾಗೂ ಇಸ್ರೇಲ್ ಸ್ಥಾಪಕ ಮತ್ತು ಮೊದಲ ಪ್ರಧಾನಿ ಡೇವಿಡ್ ಬೆನ್ - ಗುರಿಯನ್ ಅವರನ್ನು ಉಲ್ಲೇಖಿಸಿದ್ದಾರೆ.
ಹೆಚ್ಚಿನ ದೇಶಗಳು ಉನ್ನತ ಆದರ್ಶಗಳು ಮತ್ತು ಉದಾತ್ತ ಮೌಲ್ಯಗಳ ಆಧಾರದ ಮೇಲೆ ಸ್ಥಾಪಿತವಾಗುತ್ತವೆ ಮತ್ತು ಪ್ರಾರಂಭವಾಗುತ್ತವೆ. ಆದರೆ, ಹೆಚ್ಚಾಗಿ ಸಂಸ್ಥಾಪಕ ನಾಯಕರು ಮತ್ತು ಪ್ರವರ್ತಕ ಪೀಳಿಗೆಯನ್ನು ಮೀರಿ ತಲೆಮಾರುಗಳ ನಂತರ ಕ್ರಮೇಣ ವಿಷಯಗಳು ಬದಲಾಗುತ್ತವೆ ಎಂದು ಲೀ ಹೇಳಿದರು.
ರಾಷ್ಟ್ರ ನಿರ್ಮಾಣದಲ್ಲಿ ಉತ್ಸಾಹದ ತೀವ್ರತೆಯಿಂದ ಪ್ರಮುಖ ವಿಷಯಗಳು ಪ್ರಾರಂಭವಾಗುತ್ತವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಗೆದ್ದ ನಾಯಕರು ಸಾಮಾನ್ಯವಾಗಿ ಅಸಾಧಾರಣ ವ್ಯಕ್ತಿಗಳಾಗುತ್ತಾರೆ. ಅದರಂತೆ ಅಗಾಧವಾದ ಸಂಸ್ಕೃತಿ ಮತ್ತು ಮಹೋನ್ನತ ಸಾಮರ್ಥ್ಯಗಳು ಡೇವಿಡ್ ಬೆನ್ - ಗುರಿಯನ್ಸ್, ಜವಾಹರಲಾಲ್ ನೆಹರು ಬಳಿ ಇದ್ದವು. ಹಾಗೆಯೇ ನಾವು ಸಹ ನಮ್ಮದೇ ಆದ ನಾಯಕರನ್ನು ಹೊಂದಿದ್ದೇವೆ ಎಂದು ಸಂಸತ್ಗೆ ತಿಳಿಸಿದ್ದಾರೆ.