ಕರ್ನಾಟಕ

karnataka

ಜಪಾನ್: ಅಧಿಕಾರ ಸ್ವೀಕಾರಕ್ಕೆ ಸುಗಾ ಸಜ್ಜು... ಅಬೆ ಕ್ಯಾಬಿನೆಟ್​ನಿಂದ ರಾಜೀನಾಮೆ

ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಕ್ಯಾಬಿನೆಟ್ ಇಂದು ತಮ್ಮ ರಾಜೀನಾಮೆ ಸಲ್ಲಿಸಿದ್ದು, ಯೋಶಿಹಿದೆ ಸುಗಾ ಜಪಾನ್‌ನ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.

By

Published : Sep 16, 2020, 9:07 AM IST

Published : Sep 16, 2020, 9:07 AM IST

Japan's new PM,ಜಪಾನ್‌ನ ನೂತನ ಪ್ರಧಾನ ಮಂತ್ರಿ ಯೋಶಿಹಿದೆ ಸುಗಾ
ಜಪಾನ್‌ನ ನೂತನ ಪ್ರಧಾನ ಮಂತ್ರಿ ಯೋಶಿಹಿದೆ ಸುಗಾ

ಟೋಕಿಯೊ: ಯೋಶಿಹಿದೆ ಸುಗಾ ಜಪಾನ್‌ನ ಹೊಸ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದು, ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಕ್ಯಾಬಿನೆಟ್ ಬುಧವಾರ ತಮ್ಮ ರಾಜೀನಾಮೆ ಸಲ್ಲಿಸಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಲಿಬರಲ್ ಡೆಮಾಕ್ರಟಿಕ್ ಪಕ್ಷದ ಹೊಸ ನಾಯಕ ಯೋಶಿಹಿದೆ ಸುಗಾ ಬುಧವಾರ ಜಪಾನ್‌ನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೊರೊನಾ ವೈರಸ್ ನಿಯಂತ್ರಣದಲ್ಲಿಟ್ಟು ಜರ್ಜರಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ತಕ್ಷಣ ಗಮನ ಹರಿಸಲಾಗಿದೆ ಎಂದು ವರದಿ ಮಾಡಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಸುಗಾ 377 ಮತಗಳನ್ನು ಪಡೆದಿದ್ದರೆ, ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿಡಾ 89 ಮತಗಳನ್ನು ಪಡೆದಿದ್ದಾರೆ ಮತ್ತು ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ 68 ಮತಗಳನ್ನು ಪಡೆದಿದ್ದಾರೆ.

ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಹಣದುಬ್ಬರವಿಳಿತವನ್ನು ಸೋಲಿಸುವ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ವಿತ್ತೀಯ ಸರಾಗಗೊಳಿಸುವಿಕೆ ಮತ್ತು ಹಣಕಾಸಿನ ಉತ್ತೇಜನ ಸೇರಿದಂತೆ ಇತರೆ ಕ್ರಮಗಳ ಮಿಶ್ರಣವಾದ 'ಅಬೆನೊಮಿಕ್ಸ್' ಸೇರಿದಂತೆ ಅಬೆ ಅವರ ನೀತಿಗಳೊಂದಿಗೆ ಮುಂದುವರಿಯುವುದಾಗಿ ಸುಗಾ ಪ್ರತಿಜ್ಞೆ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆಗಸ್ಟ್ 28 ರಂದು ಶಿಂಜೋ ಅಬೆ ಅನಾರೋಗ್ಯದ ಕಾರಣ ನೀಡಿ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದರು.

ABOUT THE AUTHOR

...view details