ಕರ್ನಾಟಕ

karnataka

ETV Bharat / international

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಕೋಮು ಹಿಂಸೆಗೆ ಪ್ರಚೋದನೆ: ತಪ್ಪೊಪ್ಪಿಕೊಂಡ ಮುಖ್ಯ ಶಂಕಿತ, ಸಹಚರ - ಬಾಂಗ್ಲಾದೇಶದಲ್ಲಿ ಕೋಮು ಹಿಂಸೆ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರಕ್ಕೆ ಕಾರಣವಾದದ್ದು, ತನ್ನ ಫೇಸ್​​ಬುಕ್​ ಪೋಸ್ಟ್ ಎಂದು ಶಂಕಿತ ಆರೋಪಿ ಶೈಕತ್​​ ಮಂಡಲ್ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

Bangladesh
Bangladesh

By

Published : Oct 25, 2021, 7:25 PM IST

ಢಾಕಾ:ಸಾಮಾಜಿಕ ಮಾಧ್ಯಮದಲ್ಲಿ ಕೋಮು ದ್ವೇಷ ಹುಟ್ಟುಹಾಕಿದ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಮುಖ ಶಂಕಿತ ಆರೋಪಿ ಮತ್ತು ಆತನ ಸಹಚರನ ವಿಚಾರಣೆ ಪೂರ್ವ ವಿಚಾರಣೆಯಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 17 ರಂದು ಪಿರ್ಗಂಜ್ ಉಪ ಜಿಲ್ಲೆಯ ರಂಗಪುರದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಕಾರಣವಾದದ್ದು, ತನ್ನ ಫೇಸ್ಬುಕ್ ಪೋಸ್ಟ್ ಎಂದು ಶೈಕತ್​​ ಮಂಡಲ್ ಭಾನುವಾರ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಮಂಡಲ್​​ನ ಸಹಚರ ಇಸ್ಲಾಂ ಧರ್ಮಗುರು ಎನ್ನಲಾದ ರಬಿಯುಲ್(36)ವಿರುದ್ಧ ಬೆಂಕಿ ಹಚ್ಚಿದ ಮತ್ತು ಲೂಟಿ ಮಾಡಿದ ಆರೋಪವಿದೆ.

"ಶೈಕತ್ ಮಂಡಲ್ ಮತ್ತು ಅವರ ಸಹಚರ ರಬಿಯುಲ್ ಹಿರಿಯ ಮ್ಯಾಜಿಸ್ಟ್ರೇಟ್ ದೆಲ್ವಾರ್ ಹೊಸೈನ್ ಅವರ ಮುಂದೆ ಕೃತ್ಯದಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ" ಎಂದು ನ್ಯಾಯಾಲಯದ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ:ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ದುಷ್ಕರ್ಮಿಗಳ ದಾಳಿ: ಮೂವರು ಸಾವು

ಪೊಲೀಸರ ಪ್ರಕಾರ, ಅಕ್ಟೋಬರ್ 17 ರಂದು ಉಂಟಾದ ಗಲಭೆಯಲ್ಲಿ ಸುಮಾರು 70 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಯಿತು.

ABOUT THE AUTHOR

...view details