ಇಸ್ಲಾಮಾಬಾದ್: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಜೈಷ್ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇದೆ ಎನ್ನುವುದನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ.
ಜೈಷ್ ಉಗ್ರ ಸಂಘಟನೆ ಕೃತ್ಯಕ್ಕೆ ಖಂಡನೆ, ಆದರೆ ಪಾಕಿಸ್ತಾವನ್ನು ದೂರುವುದು ತಪ್ಪು ಎಂದ ಮುಷರಫ್ - ಜೈಷ್ ಮೊಹಮ್ಮದ್
ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಮುಷರಫ್, ದಾಳಿಯ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ದಾಳಿಕೋರರು ನಿಶ್ಚಿತವಾಗಿ ಜೈಷ್ ಸಂಘಟನೆಯವರಾಗಿದ್ದಾರೆ. ಇವರ ಬಗ್ಗೆ ಇಮ್ರಾನ್ ಖಾನ್ ಸೇರಿದಂತೆ ಯಾರೂ ಅನುಕಂಪ ಹೊಂದಿಲ್ಲ ಎಂದಿದ್ದಾರೆ.
ಪರ್ವೇಜ್ ಮುಷರಫ್
ಈ ದಾಳಿಯಲ್ಲಿ ಪಾಕಿಸ್ತಾನ ಯಾವುದೇ ಪಾತ್ರ ವಹಿಸಿಲ್ಲ ಎಂದು ಮುಷರಫ್ ಸ್ಪಷ್ಟನೆ ನೀಡಿದ್ದಾರೆ. ಜೈಷ್ ಸಂಘಟನೆ ಈ ದಾಳಿ ನಡೆಸಿದೆ. ಆದರೆ ಇದಕ್ಕಾಗಿ ಪಾಕಿಸ್ತಾನವನ್ನು ದೂರಬಾರದು ಎಂದಿದ್ದಾರೆ. ಒಂದು ವೇಳೆ ಪಾಕ್ ಸರ್ಕಾರ ಭಾಗಿಯಾಗಿದ್ದಲ್ಲಿ ಅದು ವಿಷಾದನೀಯ ಎಂದು ಪಾಕ್ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಹೇಳಿದ್ದಾರೆ.