ಬೀಜಿಂಗ್(ಚೀನಾ) :ಕೊರೊನಾ ವೈರಸ್ನ ಹೊಡೆತದಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ಅಡೆತಡೆ ಉಂಟಾದ ಕಾರಣದಿಂದಾಗಿ ನವೆಂಬರ್‌ನಲ್ಲಿ ಚೀನಾದ ಆರ್ಥಿಕತೆ ನಿಧಾನಗತಿಯ ವೇಗಕ್ಕೆ ಸಿಲುಕಿದೆ ಎಂದು ಬುಧವಾರ ವರದಿಯಾಗಿದೆ.
ಚೀನಾದಲ್ಲಿ ಚಿಲ್ಲರೆ ಮಾರಾಟ ಸಹ ಅಕ್ಟೋಬರ್ನಲ್ಲಿ ದುರ್ಬಲವಾಗಿದೆ. ಕಠಿಣ ಮಿತಿಗಳ ಕಾರಣದಿಂದ ವ್ಯಾಪಾರ ವಲಯ ತೀವ್ರ ಸಂಕಷ್ಟ ಎದುರಿಸಿ ಮಾರಾಟ ಕುಗ್ಗಿದ್ದಲ್ಲದೆ ಹಣದುಬ್ಬರ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಫೆಬ್ರವರಿ 4 ರಿಂದ 20ರವರೆಗೆ ವಿಂಟರ್ ಒಲಿಂಪಿಕ್ಸ್ ಚೀನಾದಲ್ಲಿ ನಡೆಯಲಿದೆ. ಆರ್ಥಿಕ ಸ್ಥಿತಿಯ ಮೇಲೆ ಒಟ್ಟಾರೆಯಾಗಿ ಸೀಮಿತ ಪರಿಣಾಮ ಬೀರಬಹುದು ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವಕ್ತಾರ ಫು ಲಿಂಗುಯಿ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಈ ವೇಳೆ ಸಹ ಕೊರೊನಾ ನಿರ್ಬಂಧಗಳು ಇತರೆ ಕಾರ್ಯ ಚಟುವಟಿಕೆಯನ್ನ ಸೀಮಿತಗೊಳಿಸಲಿವೆ ಎಂದು ಅವರು ಹೇಳಿದ್ದಾರೆ.