ಕರ್ನಾಟಕ

karnataka

By

Published : Jan 19, 2021, 7:11 PM IST

ETV Bharat / international

ಪಾಕ್​ನಲ್ಲಿ ಚೀನಾ ಲಸಿಕೆ ಸಿನೊಫಾರ್ಮ್​ಗೆ ಅನುಮೋದನೆ..

ಚೀನಾದ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಯಾದ ಬೀಜಿಂಗ್ ಇನ್​ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಸಿನೊಫಾರ್ಮ್‌ನ ಅಭಿವೃದ್ಧಿಪಡಿಸಿದೆ. ಇದು ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಕೊನೆಯ ಹಂತದ ಪ್ರಯೋಗಗಳಿಂದ ಲಸಿಕೆ ಶೇ.79.3ರಷ್ಟು ಸುರಕ್ಷಿತ ಎಂದು ಕಂಪನಿ ಹೇಳಿಕೊಂಡಿದೆ..

use
ಅನುಮೋದನೆ

ಇಸ್ಲಾಮಾಬಾದ್ :ಚೀನಾ ಸರ್ಕಾರಿ ಸ್ವಾಮ್ಯದ ಕೋವಿಡ್ ಲಸಿಕೆ ಸಿನೊಫಾರ್ಮ್‌ನ ಪಾಕಿಸ್ತಾನದ ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಪಾಕಿಸ್ತಾನ್ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಇದು ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಎರಡನೇ ಲಸಿಕೆಯಾಗಿದೆ.

ಇದಕ್ಕೂ ಮೊದಲು ಶುಕ್ರವಾರ ಪಾಕಿಸ್ತಾನದಲ್ಲಿ ತುರ್ತು ಬಳಕೆಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಅಧಿಕೃತಗೊಳಿಸಲಾಗಿದೆ. ಜನವರಿ 18, 2021 ರಂದು ರಿಜಿಸ್ಟ್ರೇಶನ್ ಬೋರ್ಡ್ ಆಫ್ ಡ್ರಾಪ್ ನಡೆಸಿದ ಸಭೆಯಲ್ಲಿ ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ ತಯಾರಿಸಿದ ಮತ್ತೊಂದು ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸಲಾಗಿದೆ ಎಂದು ನಿಯಂತ್ರಕ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಚೀನಾದ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಯಾದ ಬೀಜಿಂಗ್ ಇನ್​ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಸಿನೊಫಾರ್ಮ್‌ನ ಅಭಿವೃದ್ಧಿಪಡಿಸಿದೆ. ಇದು ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಕೊನೆಯ ಹಂತದ ಪ್ರಯೋಗಗಳಿಂದ ಲಸಿಕೆ ಶೇ.79.3ರಷ್ಟು ಸುರಕ್ಷಿತ ಎಂದು ಕಂಪನಿ ಹೇಳಿಕೊಂಡಿದೆ.

ABOUT THE AUTHOR

...view details