ಕರ್ನಾಟಕ

karnataka

ETV Bharat / international

ಪದತ್ಯಾಗ ಮಾಡಿ ಮತ್ತೆ ನೇಪಾಳದ ಪ್ರಧಾನಿ ಪಟ್ಟಕ್ಕೇರಿದ ಕೆಪಿ ಓಲಿ

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​​ನಲ್ಲಿ ನಿರ್ಣಾಯಕ ನಂಬಿಕೆ ಮತ ಕಳೆದುಕೊಂಡ ಮೂರು ದಿನಗಳ ನಂತರ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ 69 ವರ್ಷದ ಸಿಪಿಎನ್-ಯುಎಂಎಲ್ ಅಧ್ಯಕ್ಷ ಓಲಿಯನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದರು.

By

Published : May 14, 2021, 5:26 AM IST

K P Sharma Oli
K P Sharma Oli

ಕಠ್ಮಂಡು:ನೇಪಾಳದ ಸಂಸತ್ತಿನ ಅತಿದೊಡ್ಡ ರಾಜಕೀಯ ಪಕ್ಷದ ನಾಯಕರಾಗಿ ಹೊರಹೊಮ್ಮಿದ ಕೆ ಪಿ ಶರ್ಮಾ ಓಲಿ ಅವರು ಗುರುವಾರ ರಾತ್ರಿ ಮತ್ತೆ ಪ್ರಧಾನ ಮಂತ್ರಿಯನ್ನಾಗಿ ನೇಮಕವಾಗಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​​ನಲ್ಲಿ ನಿರ್ಣಾಯಕ ನಂಬಿಕೆ ಮತ ಕಳೆದುಕೊಂಡ ಮೂರು ದಿನಗಳ ನಂತರ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ 69 ವರ್ಷದ ಸಿಪಿಎನ್-ಯುಎಂಎಲ್ ಅಧ್ಯಕ್ಷ ಓಲಿಯನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದರು.

ನೇಪಾಳ ಸಂವಿಧಾನದ 78 (3)ನೇ ವಿಧಿ ಪ್ರಕಾರ ಪ್ರತಿನಿಧಿ ಸದನದಲ್ಲಿ ಅತಿದೊಡ್ಡ ರಾಜಕೀಯ ಪಕ್ಷದ ನಾಯಕನಾಗಿ ಅಧ್ಯಕ್ಷ ಭಂಡಾರಿ ಅವರು ಒಲಿಯನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ ಎಂದು ಅಧ್ಯಕ್ಷ ಕಚೇರಿ ಗುರುವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರ ಶಿಟಾಲ್ ನಿವಾಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಅಧ್ಯಕ್ಷ ಭಂಡಾರಿ ಅವರು ಓಲಿ ಅವರಿಗೆ ಪ್ರಮಾಣ ವಚನ ಪಡೆಯಲ್ಲಿದ್ದಾರೆ. ಸೋಮವಾರ ಸದನದಲ್ಲಿ ವಿಶ್ವಾಸಮತವನ್ನು ಕಳೆದುಕೊಂಡ ನಂತರ ಗುರುವಾರ ರಾತ್ರಿ 9 ಗಂಟೆಯೊಳಗೆ ಹೊಸ ಸರ್ಕಾರ ರಚಿಸಲು ಬಹುಮತದ ಶಾಸಕರ ಬೆಂಬಲದೊಂದಿಗೆ ಬರಬೇಕೆಂದು ಅಧ್ಯಕ್ಷರು ವಿರೋಧ ಪಕ್ಷಗಳಿಗೆ ಸೂಚಿಸಿದ್ದರು.

ABOUT THE AUTHOR

...view details