ಬೀಜಿಂಗ್(ಚೀನಾ): ಪ್ರಪಂಚದಲ್ಲೇ ಭಯ ಹುಟ್ಟಿಸಿರುವ ಕೊರೊನಾ ವೈರಸ್(COVID-19) ಈಗಾಗಲೇ ಸಾವಿರಾರು ಜೀವಗಳನ್ನು ಬಲಿ ಪಡೆದಿದೆ. ಇನ್ನು ಈ ವೈರಸ್ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಇದರಿಂದ ತಾಯಿಯ ಗರ್ಭದಲ್ಲಿರುವ ಶಿಶುವಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ಈ ಬಗ್ಗೆ ಚೀನಾದ ಪೀಕಿಂಗ್ ವಿವಿ ಅಧ್ಯಯನ ನಡೆಸಿದ್ದು, ಕೊರೊನಾವೈರಸ್ಗೆ ತುತ್ತಾದ ಗರ್ಭಿಣಿಯರ ಪರೀಕ್ಷೆ ನಡೆಸಿ, ಈ ವೈರಸ್ನಿಂದಾಗಿ ಗರ್ಭದಲ್ಲಿರುವ ಶಿಶುವಿಗೆ ವೈರಸ್ ಹರಡುವ ಸಾಧ್ಯತೆ ಇಲ್ಲ. ಆದರೆ ತಾಯಿ ಈ ವೈರಸ್ನಿಂದ ಬಳಲುತ್ತಿದ್ದರೆ ಜನನ ನಂತರ ಮಗುವಿನ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಿಸಲಿದೆ ಎಂದು ತಿಳಿಸಿದೆ.
ಈ ಸಂಶೋಧನೆಗೆ 9 ಗರ್ಭಿಣಿಯರನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಮಹಿಳೆಯರು ಮಗುವಿಗೆ ಸಾಮಾನ್ಯವಾಗಿಯೇ ಜನ್ಮ ನೀಡಿದ್ದಾರೆ. ಆದರೆ ಇಬ್ಬರು ಮಹಿಳೆಯರ ಭ್ರೂಣದಲ್ಲಿ ಸ್ವಲ್ಪ ಮಟ್ಟಿನ ತೊಂದರೆ ಕಾಣಿಸಿಕೊಂಡಿತ್ತು ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಗರ್ಭಧಾರಣೆಯ ಮೊದಲ ಅಥವಾ ಎರಡನೆಯ ತಿಂಗಳಲ್ಲಿ ತಾಯಂದಿರು ಈ ವೈರಸ್ ಸೋಂಕಿಗೆ ಒಳಗಾಗುವುದರಿಂದ ಉಂಟಾಗುವ ಪರಿಣಾಮಗಳು ಮತ್ತು ಶಿಶು ಜನನದ ಸಮಯದಲ್ಲಿ ಈ ವೈರಸ್ ತಾಯಿಯಿಂದ ಮಗುವಿಗೆ ರವಾನೆಯಾಗುವುದು ಕಷ್ಟ ಎಂದು ಸಂಶೋಧಕರು ತಿಳಿಸಿದ್ದಾರೆ.