ಜರುಸಲೇಂ(ಇಸ್ರೇಲ್): 2019ರ ನವೆಂಬರ್‌ನಲ್ಲಿ ಡ್ರ್ಯಾಗನ್ ದೇಶ ಚೀನಾದ ಹುವಾನ್‌ನಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಜೊತೆಗೆ ಅಲ್ಪಾ, ಬೇಟಾ, ಡೆಲ್ಟಾ, ಡೆಲ್ಟಾ ಪ್ಲಸ್, ಕಪ್ಪಾ, ಈಟಾ ಹಾಗೂ ಒಮಿಕ್ರಾನ್ ರೂಪಾಂತರಗೊಂಡು ಅಟ್ಟಹಾಸ ಮೆರೆಯುತ್ತಿದೆ. ಇದರ ನಡುವೆ ಇಸ್ರೇಲ್‌ನಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಇದರ ಹೆಸರು ಫ್ಲೊರೊನಾ.
ಫ್ಲೊರೊನಾ ಎಂದರೇನು?
ಇಸ್ರೇಲ್‌ನಲ್ಲಿ ಹೊಸ ವೈರಸ್ ಫ್ಲೊರೊನಾ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸದ್ಯ ಈ ಫ್ಲೊರೊನಾ ಎಂದರೆ ಕೋವಿಡ್-19, ಇನ್‌ಫ್ಲೋಯೆಂಜ್ ಡಬಲ್ ಇನ್‌ಫೆಕ್ಷನ್ ಎಂಬ ಅರ್ಥ ಕೊಡುತ್ತದೆ.
ಇಸ್ರೇಲ್‌ನಲ್ಲಿ ಈ ರೀತಿಯ ಹೊಸ ವೈರಸ್ ಬೆಳಕಿಗೆ ಬರುತ್ತಿದಂತೆ ಎಚ್ಚೆತ್ತ ಇಸ್ರೇಲ್ ಸರ್ಕಾರ ರೋಗ ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದೆ. ಮತ್ತೊಂದೆಡೆ, ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಕೋವಿಡ್ ಅಬ್ಬರ ಶುರು ; ಇಂದು 832 ಮಂದಿಗೆ ಸೋಂಕು