ನವದೆಹಲಿ :ಸಾಕಷ್ಟು ಬೆಳವಣಿಗೆಗಳ ರಾಜಕೀಯ ಮತ್ತು ಮಿಲಿಟರಿ ನಂತರ ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚಿಸಲು ಸಿದ್ಧತೆ ನಡೆಸಿರುವ ತಾಲಿಬಾನ್ ಉಗ್ರ ಸಂಘಟನೆಯಿಂದ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ)ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ತನ್ನ ನೇತೃತ್ವದ ತಂಡದೊಂದಿಗೆ ಶನಿವಾರ ಕಾಬೂಲ್ಗೆ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಮೂಲಕ ಭಾರತವೂ ಸೇರಿ ಹಲವು ರಾಷ್ಟ್ರಗಳಲ್ಲಿ ಹಲವಾರು ಅನುಮಾನಗಳು ಮೂಡಿವೆ.
ಅಂತಾರಾಷ್ಟ್ರೀಯ ಸಮುದಾಯಗಳ ಮನವೊಲಿಕೆಗೆ ತಾಲಿಬಾನ್ ಈಗಾಗಲೇ ಹರಸಾಹಸ ನಡೆಸುತ್ತಿದೆ. ಅದರಲ್ಲೂ ಸರ್ಕಾರ ರಚನೆ ಅಂತಾರಾಷ್ಟ್ರೀಯ ಸಮುದಾಯಗಳಿಗೆ ಒಪ್ಪಿಗೆಯಾಗುವಂತಿರಬೇಕೆಂದು ತಾಲಿಬಾನ್ ಹವಣಿಸುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಐಎಸ್ಐ ಮುಖ್ಯಸ್ಥ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.