ಕರ್ನಾಟಕ

karnataka

By

Published : Jan 10, 2021, 7:34 PM IST

ETV Bharat / international

ಶಕ್ತಿಶಾಲಿ ರಾಷ್ಟ್ರಗಳಿಗಿಂತ ಗಮನಾರ್ಹ ಚೇತರಿಕೆ ಕಾಣುತ್ತಿದೆ ಚೀನಾ ಆರ್ಥಿಕತೆ : ಐಎಂಎಫ್​

ಈಗಾಗಲೇ ಅಮೆರಿಕ ನಂತರ ಜಗತ್ತಿನ 2ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಚೀನಾ ಹೊರಹೊಮ್ಮಿದೆ. ಖಾಸಗಿ ವಲಯದ ಹೂಡಿಕೆಯಿಂದ ಆರ್ಥಿಕ ಚಟುವಟಿಕೆಗೆ ಬಲ ಬಂದಿದೆ. ಆದರೆ, ಗ್ರಾಹಕರ ಖರೀದಿ ಶಕ್ತಿ ಹೆಚ್ಚುತ್ತಿಲ್ಲ ಎಂಬುದೇ ಆಘಾತಕಾರಿ ಸಂಗತಿ. ಆರ್ಥಿಕ ಸಂಕಷ್ಟಕ್ಕೂ ಮುಂಚಿನ ದಿನಗಳಿಗೆ ಹೋಲಿಸಿದ್ರೆ ಈಗ ಬೇಡಿಕೆ ಮತ್ತು ಬಳಕೆ ಮಟ್ಟದಲ್ಲಿ ಇನ್ನೂ ಸುಧಾರಣೆ ಅಗತ್ಯ..

IMF
ಚೀನಾ ಆರ್ಥಿಕತೆ

ವಾಷಿಂಗ್ಟನ್ :ಜಗತ್ತಿನ ಇತರ ಶಕ್ತಿಶಾಲಿ ರಾಷ್ಟ್ರಗಳಿಗೆ ಹೋಲಿಸಿದ್ರೆ, ಚೀನಾ ಆರ್ಥಿಕತೆ ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿದೆ. ಆದರೆ, ಚೇತರಿಕೆ ಇನ್ನೂ ಅಸಮತೋಲಿತವಾಗಿದ್ದು, ಮುಂಬರುವ ದಿನಗಳಲ್ಲಿ ಗಮನಾರ್ಹ ತೊಂದರೆ ಎದುರಿಸುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದೆ.

2021ನೇ ವರ್ಷದಲ್ಲಿ ಚೀನಾ ಆರ್ಥಿಕ ಪ್ರಗತಿ ಶೇ.8ರಷ್ಟಿರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ‌ ಅಂದಾಜಿಸಿದೆ. ಆದರೆ, ಮುಂಬರುವ ದಿನಗಳಲ್ಲಿ ಮತ್ತೆ ಕುಸಿಯುವ ಅಪಾಯವನ್ನು ಸಹ ಚೀನಾ ಆರ್ಥಿಕತೆ ಎದುರಿಸುತ್ತಿದೆ ಎಂದು ಐಎಂಎಫ್‌ನ ಏಷ್ಯಾ ಹಾಗೂ ಪೆಸಿಫಿಕ್‌ ವಿಭಾಗದ ಸಹಾಯಕ ನಿರ್ದೇಶಕ, ಚೀನಾಕ್ಕೆ ಸಂಬಂಧಿಸಿದ ವ್ಯವಹಾರಗಳ ಮುಖ್ಯಸ್ಥ ಹೆಲ್ಗೆ ಬರ್ಗರ್‌ ಹೇಳಿದ್ದಾರೆ.

ಇದನ್ನು ಓದಿ: ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದಾರೆ ಇಬ್ಬರು ಭಾರತೀಯ-ಅಮೆರಿಕನ್ನರು

ಈಗಾಗಲೇ ಅಮೆರಿಕ ನಂತರ ಜಗತ್ತಿನ 2ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಚೀನಾ ಹೊರಹೊಮ್ಮಿದೆ. ಖಾಸಗಿ ವಲಯದ ಹೂಡಿಕೆಯಿಂದ ಆರ್ಥಿಕ ಚಟುವಟಿಕೆಗೆ ಬಲ ಬಂದಿದೆ. ಆದರೆ, ಗ್ರಾಹಕರ ಖರೀದಿ ಶಕ್ತಿ ಹೆಚ್ಚುತ್ತಿಲ್ಲ ಎಂಬುದೇ ಆಘಾತಕಾರಿ ಸಂಗತಿ. ಆರ್ಥಿಕ ಸಂಕಷ್ಟಕ್ಕೂ ಮುಂಚಿನ ದಿನಗಳಿಗೆ ಹೋಲಿಸಿದ್ರೆ ಈಗ ಬೇಡಿಕೆ ಮತ್ತು ಬಳಕೆ ಮಟ್ಟದಲ್ಲಿ ಇನ್ನೂ ಸುಧಾರಣೆ ಅಗತ್ಯ ಎಂದೂ ಬರ್ಗರ್‌ ಹೇಳಿದ್ದಾರೆ.

ಹೆಚ್ಚಾದ ಸಾರ್ವಜನಿಕರ ಬೆಂಬಲವನ್ನು ಚೇತರಿಕೆ ಪ್ರಮಾಣ ಅವಲಂಬಿಸಿದೆ. ಖಾಸಗಿ ಹೂಡಿಕೆ ಇತ್ತೀಚೆಗೆ ಬಲಗೊಳ್ಳುತ್ತಿದೆ. ಅಷ್ಟೇ ಅಲ್ಲ, ಬೆಳವಣಿಗೆಯ ದರಗಳು ಮತ್ತು ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಆದರೆ, ಬಿಕ್ಕಟ್ಟಿನ ಪೂರ್ವದ ಪ್ರವೃತ್ತಿಗೆ ಹೋಲಿಸಿದ್ರೆ ಬಳಕೆಯ ಮಟ್ಟ ಇನ್ನೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ABOUT THE AUTHOR

...view details