ಕರ್ನಾಟಕ

karnataka

ETV Bharat / international

ನೇಪಾಳದಲ್ಲಿ ಜು. 22ರವರೆಗೆ ಲಾಕ್‌ಡೌನ್: ವಿಶ್ವದಲ್ಲಿ 1.04 ಕೋಟಿ ಸೋಂಕಿತರು

ನೇಪಾಳ ಸರ್ಕಾರ ಜುಲೈ 22ರವರೆಗೆ ಲಾಕ್‌ಡೌನ್ ವಿಸ್ತರಿಸುವ ನಿರ್ಧಾರವನ್ನು ಪ್ರಕಟಿಸಿದೆ. ಮಾರ್ಚ್‌ನಿಂದ ನೇಪಾಳದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದು, ಅಂದಿನಿಂದ 6 ಬಾರಿ ಲಾಕ್​ಡೌನ್ ವಿಸ್ತರಣೆಯೂ ಆಗಿದೆ.

covid-19
covid-19

By

Published : Jun 30, 2020, 10:48 AM IST

ಹೈದರಾಬಾದ್:ವಿಶ್ವದಲ್ಲಿಈವರೆಗೆ 1,04,02,637 (1.04ಕೋಟಿ)ಗೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ವಿಶ್ವದಾದ್ಯಂತ 5,07,51ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಈವರೆಗೆ 56,56,562ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.

ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದರಿಂದ, ನೇಪಾಳ ಸರ್ಕಾರ ಜುಲೈ 22ರವರೆಗೆ ಲಾಕ್‌ಡೌನ್ ವಿಸ್ತರಿಸುವ ನಿರ್ಧಾರವನ್ನು ಪ್ರಕಟಿಸಿದೆ.

ವಿಶ್ವಾದ್ಯಂತ ಕೊರೊನಾ ಪ್ರಕರಣಗಳು

ಮಂತ್ರಿಮಂಡಲ ಸಭೆ ನಡೆಸಿ ಸೀಮಿತ ವ್ಯವಹಾರ ಮತ್ತು ಚಟುವಟಿಕೆಗಳನ್ನು ನಿರ್ವಹಿಸಲು ಅನುಮತಿ ಇರುವ ಪ್ರಸ್ತುತ ಸ್ವರೂಪದಲ್ಲಿ ಲಾಕ್‌ಡೌನನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ.

ಜೂನ್ 15ರಂದು ಸರ್ಕಾರವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೆಲ ಮಾರ್ಗಸೂಚಿಗಳೊಂದಿಗೆ ಖಾಸಗಿ ವಾಹನಗಳ ಚಲನೆಗೆ ಅವಕಾಶ ನೀಡುವ ಮೂಲಕ ಲಾಕ್‌ಡೌನ್ ಸ್ವರೂಪವನ್ನು ಬದಲಾಯಿಸಿತ್ತು.

ಮಾರ್ಚ್‌ನಿಂದ ನೇಪಾಳದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದು, ಅಂದಿನಿಂದ 6 ಬಾರಿ ಲಾಕ್​ಡೌನ್ ವಿಸ್ತರಣೆಯೂ ನಡೆದಿದೆ. ನೇಪಾಳದಲ್ಲಿ ಪ್ರತಿದಿನ ಸರಾಸರಿ 400 ಕೋವಿಡ್ -19 ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.

ಇನ್ನು ಭಾರತದಲ್ಲಿ ಸೋಂಕಿತರ ಸಂಖ್ಯೆ 5.67 ಲಕ್ಷಕ್ಕೇರಿದ್ದು, ಸಾವಿನ ಸಂಖ್ಯೆ 17 ಸಾವಿರದ ಗಡಿಗೆ ಬಂದು ನಿಂತಿದೆ.

ABOUT THE AUTHOR

...view details