ಬೀಜಿಂಗ್:ಪತ್ರಿಕಾ ಸ್ವಾತಂತ್ರ್ಯದ ಕುರಿತಾದ ಲೇಖನವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ ಸರ್ಕಾರ ಬ್ರಿಟನ್ ರಾಯಭಾರಿ ಕ್ಯಾರೋಲಿನ್ ವಿಲ್ಸನ್ಗೆ ಸಮನ್ಸ್ ನೀಡಿದೆ.
ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್ ವಿಚಾಟ್‌ನಲ್ಲಿ ಅವರು ಕಳೆದ ವಾರ ಪ್ರಕಟಿಸಿದ ಪೋಸ್ಟ್‌ನ ವಿರುದ್ಧ ಆಕ್ರೋಶ ಹೊರಬಿದ್ದಿದೆ. ವಿಲ್ಸನ್ "ಚೀನಾದಲ್ಲಿ ವಿದೇಶಿ ಮಾಧ್ಯಮಗಳನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ, ಅದು ಅವರ ಸಕಾರಾತ್ಮಕ ಪಾತ್ರವನ್ನು ಮರೆಮಾಚುತ್ತದೆ" ಎಂದು ಬರೆದಿದ್ದರು.
ಹಾಂಕಾಂಗ್‌ನ ರಾಜಕೀಯ ಭವಿಷ್ಯ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿನ ಮಾನವ ಹಕ್ಕುಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಯುಕೆ ಮತ್ತು ಚೀನಾ ದೇಶಗಳಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಆಂದೋಲನಗಳು ಹೆಚ್ಚುತ್ತಿವೆ. ಈ ವಿವಾದಗಳು ಚೀನಾದ ಟೆಕ್ ಸಂಸ್ಥೆ ಹುವಾವೇ ಮತ್ತು ಬ್ರಿಟಿಷ್ ಬ್ಯಾಂಕ್ ಎಚ್‌ಎಸ್‌ಬಿಸಿ ಸೇರಿದಂತೆ ವ್ಯವಹಾರಗಳಲ್ಲಿ ತಲ್ಲಣ ಉಂಟುಮಾಡಿದೆ. ಆಯಾ ದೇಶಗಳ ಪ್ರಮುಖ ಮಾಧ್ಯಮಗಳನ್ನು ಬೇರೆ ದೇಶದಿಂದ ನಿಷೇಧಿಸಲಾಗಿದೆ. "ವಿದೇಶಿ ಮಾಧ್ಯಮಗಳಿಗಿಂತ ಭಿನ್ನವಾಗಿ, ಚೀನಾದ ಮಾಧ್ಯಮವು ಸರ್ಕಾರವು ಅನುಮತಿಸಿದ ಷರತ್ತುಗಳ ಅಡಿಯಲ್ಲಿ ಮಾತ್ರ ವಿಮರ್ಶಾತ್ಮಕವಾಗಿ ವರದಿ ಮಾಡಬಹುದು" ಎಂದು ಅವರು ಬರೆದಿದ್ದಾರೆ. ಈ ಲೇಖನವು ಚೀನಾದ ಅಧಿಕಾರಿಗಳನ್ನು ಕೆರಳಿಸಿದೆ. ಹೀಗಾಗಿ ಅಧಿಕಾರಿಗಳು ವಿಲ್ಸನ್ ಈ ಹುದ್ದೆಗೆ "ಸೂಕ್ತವಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಚೀನಾದ ಅಧಿಕಾರಿಯೊಬ್ಬರು ತಮ್ಮ ಹೇಳಿಕೆಯೊಂದರಲ್ಲಿ ಚೀನಾದ ಸರ್ಕಾರ ಮತ್ತು ಜನರು ಎಂದಿಗೂ ವಿದೇಶಿ ಮಾಧ್ಯಮವನ್ನು ವಿರೋಧಿಸುವುದಿಲ್ಲ, ಆದರೆ ನಕಲಿ ಸುದ್ದಿಗಳನ್ನು ತಯಾರಿಸುವವರು ಮತ್ತು ಚೀನಾ, ಚೀನೀ ಕಮ್ಯುನಿಸ್ಟ್ ಪಕ್ಷ ಮತ್ತು ಚೀನಾದ ವ್ಯವಸ್ಥೆಯನ್ನು ಕೆಟ್ಟದಾಗಿ ಆಕ್ರಮಣ ಮಾಡುವವರು 'ಪತ್ರಿಕಾ ಸ್ವಾತಂತ್ರ್ಯ' ವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.