ಕರ್ನಾಟಕ

karnataka

By

Published : Nov 25, 2020, 8:12 PM IST

ETV Bharat / international

ಆಮದಾಗುವ ಆಹಾರ ಪದಾರ್ಥಗಳ ಪೊಟ್ಟಣಗಳಿಗೂ ಕೊರೊನಾ ಪರೀಕ್ಷೆ ಮಾಡ್ತಿದೆ ಚೀನಾ!

ಕೊರೊನಾ ಎರಡನೇ ಅಲೆ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಚೀನಾದಲ್ಲಿ ಪ್ರತಿಯೊಂದು ಆಹಾರ ಪದಾರ್ಥಗಳಿಗೂ ವೈರಸ್​ ಪರೀಕ್ಷೆ ನಡೆಸಲಾಗುತ್ತಿದೆ.

China stepping up virus testing
ಚೀನಾದಲ್ಲಿ ಆಹಾರ ಪರ್ಥಾಗಳ ಕೊರೊನಾ ತಪಾಸಣೆ

ಬೀಜಿಂಗ್: ತಂಪಾದ ಹವಾಮಾನದಿಂದ ಹಲವು ಸಾಗರೋತ್ತರ ದೇಶಗಳಲ್ಲಿ ಕೊರೊನಾ ಹೊಸ ಅಲೆ ಏಳುತ್ತಿದೆ. ಹೀಗಾಗಿ ಆಮದು ಮಾಡಿಕೊಂಡ ಆಹಾರ ಪದಾರ್ಥಗಳ ಪೊಟ್ಟಣಗಳ ಕೊರೊನಾ ವೈರಸ್ ತಪಾಸಣೆಯನ್ನು ಚುರುಕುಗೊಳಿಸುತ್ತಿರುವುದಾಗಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾಕ್ ಮಾಡಿದ ಆಹಾರ ವೈರಸ್​ ಹರಡುವಿಕೆಯಿಂದ ಹೊರತಾಗಿಲ್ಲ ಎಂದು ನ್ಯಾಷನಲ್ ಫುಡ್​ ಸೇಫ್ಟಿ ರಿಸ್ಕ್​ ಅಸೆಸ್​ಮೆಂಟ್​ ಸೆಂಟರ್​ ಉಪ ನಿರ್ದೇಶಕಿ ಲಿ ನಿಂಗ್ ತಿಳಿಸಿದ್ದಾರೆ. ಆಹಾರ ಪದಾರ್ಥಗಳ ಪೊಟ್ಟಣಗಳಲ್ಲಿ ಕೊರೊನಾ ವೈರಸ್​ ಪರೀಕ್ಷೆಯನ್ನು 10 ಸಾವಿರಕ್ಕೆ ಕೇವಲ 0.48ರಷ್ಟು ಮಾತ್ರ ಮಾಡಲಾಗುತ್ತಿದೆ. ಇದನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮನುಷ್ಯನಿಂದ ಪ್ಯಾಕ್​ ಮಾಡಿದ ಆಹಾರದ ಮೇಲೆ ಸ್ವಲ್ಪ ಮಟ್ಟಿಗೆ ವೈರಸ್​ ಹರಡಬಹುದು ಎಂದು ಲಿ ನಿಂಗ್ ತಿಳಿಸಿದ್ದಾರೆ. ಆದರೆ ಈ ರೀತಿ ವೈರಸ್​ ಹಬ್ಬಿದ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಪ್ಯಾಕಿಂಗ್ ಆಹಾರದ ಕೊರೊನಾ ಪರೀಕ್ಷೆಯನ್ನು ಕೆಲ ಆಹಾರ ಪದಾರ್ಥ ರಫ್ತುದಾರರು ವಿರೋಧಿಸಿದ್ದು, ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಸುವಂತೆ ಹೇಳಿದ್ದಾರೆ. ಆದರೆ ಇದು ವೈರಸ್​ ಹರಡುವುದನ್ನು ತಡೆಗಟ್ಟುವ ಮುಂದುವರೆದ ಕ್ರಮ ಎಂದು ಚೀನಾ ಸಮರ್ಥಿಸಿಕೊಂಡಿದೆ.

ABOUT THE AUTHOR

...view details