ಬೀಜಿಂಗ್, ಚೀನಾ:ಕೋವಿಡ್ ಕುರಿತ ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಕೆಲವೊಂದು ಬಾರಿ ಕೋವಿಡ್ ಮಾರಕ ಎಂದು ಎನ್ನಿಸಿದರೂ, ಇನ್ನೂ ಕೆಲವು ಬಾರಿ ಸಾಮಾನ್ಯ ಶೀತ, ಜ್ವರ ಎಂಬಂತೆ ಭಾಸವಾಗುತ್ತದೆ. ಆದರೆ, ಕೋವಿಡ್ ತಡೆಗಾಗಿ ಚೀನಾ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ ಆಶ್ಚರ್ಯವಾಗುವುದಂತೂ ಖಚಿತ.
ಕೊರೊನಾ ಸೃಷ್ಟಿಕರ್ತನಾದ ಚೀನಾ, ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈಗಲೂ ಕೂಡಾ ಅದು ಕಠಿಣ ಕ್ರಮಗಳನ್ನು ಅಲ್ಲಿನ ನಾಗರಿಕರ ಮೇಲೆ ಹೇರಿದೆ. ಬೇರೆ ದೇಶಗಳಿಗಿಂತ ಕಡಿಮೆ ಸೋಂಕಿತರು ಚೀನಾದಲ್ಲಿದ್ದರೂ, ಅಲ್ಲಿನ ಬಿಗಿಯಾದ ಕ್ರಮಗಳು ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಿವೆ.
ಚೀನಾದಲ್ಲಿ ಕೋವಿಡ್ ಮಾರ್ಗಸೂಚಿಗಳು ಕಠಿಣವಾಗಿವೆ ಎಂಬುದಕ್ಕೆ ಸಾಂಗ್ಪಿಂಗಾಂಕ್ ಎಂಬ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋಗಳು ಮತ್ತಷ್ಟು ಪುಷ್ಟಿ ನೀಡುವಂತಿವೆ. ಒಂದು ಟ್ವೀಟ್ನಲ್ಲಿ ಚೀನಾದ ಲಕ್ಷಾಂತರ ಮಂದಿ ವಾಸ ಮಾಡುವ ಕ್ವಾರಂಟೈನ್ ಕ್ಯಾಂಪ್ ಎಂದು ಉಲ್ಲೇಖಿಸಲಾಗಿದೆ.