ಬೀಜಿಂಗ್ (ಚೀನಾ): ಜೂನ್ ತಿಂಗಳಿನಿಂದ ನಿಲ್ಲಿಸಿದ್ದ ಕಚ್ಚಾ ತೈಲ ಆಮದು ಪ್ರಕ್ರಿಯೆಯನ್ನು ಚೀನಾ ಪುನಾರಂಭಿಸಿದೆ. ಇರಾನ್ನಿಂದ ದಿನಕ್ಕೆ 1 ಲಕ್ಷದ 20 ಸಾವಿರ ಬ್ಯಾರಲ್ಗಳಷ್ಟು ಕಚ್ಚಾ ತೈಲವನ್ನು ಇರಾನ್ನಿಂದ ಜುಲೈನಲ್ಲಿ ಆಮದು ಮಾಡಿಕೊಳ್ಳಲಾಗಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.
ಮಾಹಿತಿ ವಿಶ್ಲೇಷಣಾ ಕಂಪನಿಯಾದ ಕೆಪ್ಲರ್ ರೇಡಿಯೋ ಫರ್ದಾಗೆ ಈ ಮಾಹಿತಿ ನೀಡಿದ್ದಾಗಿ ವರದಿಯಾಗಿದ್ದು, ಇಂಡೋನೇಷ್ಯಾದ ಮೂಲದ ಗಿಸ್ಸೆಲ್ ಎಂಬ ಲೇಬಲ್ ಇರುವ, ಆದರೆ ಮೂಲತಃ ಇರಾನ್ ಮೂಲದ ತೈಲವನ್ನು ಚೀನಾ ಆಮದು ಮಾಡಿಕೊಂಡಿದೆ ಎನ್ನಲಾಗ್ತಿದೆ.