ಹಾಂಕಾಂಗ್: ಕೊರೊನಾ ವೈರಸ್ ಭೀತಿ ಕಡಿಮೆಯಾಗುತ್ತಿದ್ದಂತೆಯೇ ಹಾಂಕಾಂಗ್ನಲ್ಲಿ ಕಾರ್ಮಿಕ ದಿನದಂದು ಸರ್ಕಾರ ವಿರೋಧಿ ಪ್ರತಿಭಟನೆಗಳು ಮತ್ತೆ ಭುಗಿಲೆದ್ದಿವೆ. ಚೀನಾದ ವಿಶೇಷಾಡಳಿತ ಪ್ರದೇಶ ಹಾಂಕಾಂಗ್ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಪ್ಪರ್ ಸ್ಪ್ರೇ ಪ್ರಯೋಗಿಸಬೇಕಾಯಿತು.
ಕಾರ್ಮಿಕ ದಿನದಂದು ಹಾಂಕಾಂಗ್ನಲ್ಲಿ ಭುಗಿಲೆದ್ದ ಪ್ರತಿಭಟನೆ!
ಚೀನಾದ ವಿಶೇಷಾಡಳಿತ ಪ್ರದೇಶ ಹಾಂಕಾಂಗ್ನಲ್ಲಿ ಇಂದು ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಪ್ಪರ್ ಸ್ಪ್ರೇ ಪ್ರಯೋಗಿಸಬೇಕಾಯಿತು. ಮೇ 1 ರಂದು ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದ ರ್ಯಾಲಿಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ, ಫ್ಲ್ಯಾಶ್ ಮಾಬ್ ಮಾದರಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.
ಪ್ರತಿಭಟನಾಕಾರರು ಶುಕ್ರವಾರ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಿರಲಿಲ್ಲ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಮಾತ್ರ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿದ್ದವು. ಶುಕ್ರವಾರ ಸಂಜೆ 7 ರ ಹೊತ್ತಿಗೆ ನ್ಯೂ ಟೌನ್ ಪ್ಲಾಜಾ ಬಳಿ ಜಮಾಯಿಸಿದ ಜನತೆ "ಗ್ಲೋರಿ ಟು ಹಾಂಕಾಂಗ್" ಪ್ರಭುತ್ವ ವಿರೋಧಿ ರಾಷ್ಟ್ರಗೀತೆಯನ್ನು ಹಾಡಲಾರಂಭಿಸಿದ್ದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಪೆಪ್ಪರ್ ಸ್ಪ್ರೇ ಪ್ರಯೋಗಿಸಿ ಜನರನ್ನು ಚದುರಿಸಿದ್ದರು.
ಮೇ 1 ರಂದು ಕಾರ್ಮಿಕ ದಿನಾಚರಣೆ ನಿಮಿತ್ತ ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದ ರ್ಯಾಲಿಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ, ಫ್ಲ್ಯಾಶ್ ಮಾಬ್ ಮಾದರಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು.