ಕಾಬೂಲ್ (ಅಫ್ಘಾನಿಸ್ತಾನ): ಅಫ್ಘನ್ ವಾಯುಪಡೆ (ಎಎಎಫ್) ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ಸಂಘಟನೆಯ 11 ಮಂದಿ ಹಾಗೂ ಇಬ್ಬರು ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದ ನವಾ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದ್ದು, ಇನ್ನೂ ಇಬ್ಬರು ಉಗ್ರರು ಗಾಯಗೊಂಡಿದ್ದಾರೆ. ಅಲ್-ಖೈದಾ ಉಗ್ರರು ತಾಲಿಬಾನ್ ಉಗ್ರರಿಗೆ ಸ್ಫೋಟಕ ಸಾಧನಗಳನ್ನು ತಯಾರಿಸಲು ಮತ್ತು ಬಳಸಲು ತರಬೇತಿ ನೀಡುತ್ತಿದ್ದಾರೆಂಬ ಮಾಹಿತಿಯಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ತಿಳಿಸಿದೆ.