ಕರ್ನಾಟಕ

karnataka

ETV Bharat / international

ಕೊರೊನಾ ಮಾಹಿತಿ ಮರೆಮಾಚಿದ್ದಕ್ಕೆ ವಿಶ್ವವೇ ಬೆಲೆ ತೆರುತ್ತಿದೆ: ಇದಕ್ಕೆ ಚೀನಾವೇ ಹೊಣೆ- ಟ್ರಂಪ್​ ಆರೋಪ​

ಆರಂಭಿಕ ಹಂತದಲ್ಲಿ ಕೊರೊನಾ ವೈರಸ್​ ಹರಡುವಿಕೆಯ ಮಾಹಿತಿಯನ್ನು ಚೀನಾ ಮರೆಮಾಚಿದ್ದರಿಂದ ಇಂದು ವಿಶ್ವವೇ ಬೆಲೆ ತೆರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.

Trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

By

Published : Mar 20, 2020, 4:30 PM IST

ವಾಷಿಂಗ್ಟನ್​: ಕೋವಿಡ್​-19 ನಿಂದಾಗಿ ಪ್ರಸ್ತುತ ಜಗತ್ತಿನಾದ್ಯಂತ ಉಂಟಾಗಿರುವ ಆರೋಗ್ಯ ಬಿಕ್ಕಟ್ಟಿಗೆ ಬೀಜಿಂಗ್​ ನೇರ ಹೊಣೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಆರಂಭಿಕ ಹಂತದಲ್ಲಿ ಕೊರೊನಾ ವೈರಸ್​ ಹರಡುವಿಕೆಯ ಮಾಹಿತಿಯನ್ನು ಚೀನಾ ಮರೆಮಾಚಿದ್ದರಿಂದ ಇಂದು ವಿಶ್ವವೇ ಬೆಲೆ ತೆರುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಚೀನಾದ ವುಹಾನ್​ ಪ್ರದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದಾಗಲೇ ಸುಳಿವು ನೀಡಿದ್ದರೆ ಇಷ್ಟೊತ್ತಿಗೆ ಪರಿಸ್ಥಿತಿ ಸುಧಾರಿಸಿರಬಹುದಿತ್ತು. ಎಲ್ಲಿ ಪ್ರಾರಂಭವಾಗಿತ್ತೋ ಅಲ್ಲೇ ತಡೆಯಬಹುದಿತ್ತು. ಆದರೆ, ಚೀನಾ ಸರ್ಕಾರ ಮಾಡಿದ ಈ ತಪ್ಪಿನಿಂದ ಇಂದು ಜನರು ಪರದಾಡುತ್ತಿದ್ದಾರೆ ಎಂದು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್​ ಹೇಳಿದ್ದಾರೆ.

ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾದ ಕೋವಿಡ್​-19ಗೆ ಪ್ರಪಂಚದಾದ್ಯಂತ ಬಲಿಯಾದವರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, 145 ದೇಶಗಳಲ್ಲಿ ಸುಮಾರು 2,10,300 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ABOUT THE AUTHOR

...view details