ವಿಲ್ಮಿಂಗ್ಟನ್:ಅಮೆರಿಕ ಉಪಾಧ್ಯಕ್ಷರಾಗಿ ಚುನಾಯಿತರಾದ ಬಳಿಕ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿದ ಮಾತನಾಡಿರುವ ಕಮಲಾ ಹ್ಯಾರಿಸ್, "ನಾನು ಈ ಕಚೇರಿಗೆ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದರೂ, ಕೊನೆಯವಳಾಗಿರುವುದಿಲ್ಲ, ಈ ಕಾರ್ಯಕ್ರಮ ನೋಡುತ್ತಿರುವ ಪ್ರತಿಯೊಬ್ಬ ಪುಟ್ಟ ಮಗುವೂ ಕೂಡ ಈ ದೇಶದಲ್ಲಿನ ಸಾಧ್ಯತೆಗಳ ಬಗ್ಗೆ ಎದುರು ನೋಡುತ್ತಿರುತ್ತಾಳೆ" ಎಂದು ಹೇಳಿದ್ದಾರೆ.
ಮತದಾರರಿಗೆ ಧನ್ಯವಾದ ತಿಳಿಸಿದ ಕಮಲಾ ಹ್ಯಾರಿಸ್ "ನೀವು ಸ್ಪಷ್ಟ ಸಂದೇಶವನ್ನು ನೀಡಿದ್ದೀರಿ, ನೀವು ಭರವಸೆ ಮತ್ತು ಏಕತೆ, ಸಭ್ಯತೆ, ವಿಜ್ಞಾನ ಮತ್ತು ಸತ್ಯವನ್ನು ಆರಿಸಿದ್ದೀರಿ. ನೀವು ಜೋ ಬೈಡನ್ ಅವರನ್ನು ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೀರಿ, ಅಮೆರಿಕಕ್ಕೆ ಹೊಸ ದಿನವನ್ನು ನೀಡಿದ್ದೀರಿ" ಎಂದು ಹೇಳಿದ್ದಾರೆ.