ವಾಷಿಂಗ್ಟನ್: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಿತ್ರ ರಾಷ್ಟ್ರಗಳಿಗೆ ಅಗತ್ಯವಿರುವ ವೆಂಟಿಲೇಟರ್‌ಗಳನ್ನು ಪೂರೈಸಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರಿಗೆ ಚಿಕಿತ್ಸೆ ನೀಡಲು ಯುಎಸ್ನಲ್ಲಿ ಅಗತ್ಯವಿರುವ ವೆಂಟಿಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
ಕೊರೊನಾ ವೈರಸ್ ತಗುಲಿ ಪರೀಕ್ಷೆಗೆ ಒಳಗಾಗಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಮಾತನಾಡಿದ ವೇಳೆ ಟ್ರಂಪ್, ಬೋರಿಸ್ ಜಾನ್ಸನ್ ಮೊದಲು ಸಹಾಯ ಕೇಳಿದ್ದು ವೆಂಟಿಲೇಟರ್‌ಗಳನ್ನು ಎಂದು ತಿಳಿಸಿದ್ದಾರೆ.
ಬೋರಿಸ್ ಜಾನ್ಸನ್ ಇಂದು ವೆಂಟಿಲೇಟರ್‌ಗಳನ್ನು ಕೇಳುತ್ತಿದ್ದರು. ದುರದೃಷ್ಟವಶಾತ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರು ಗುಣಮುಖರಾಗುತ್ತಾರೆಂದು ನನಗೆ ಭರವಸೆ ಇದೆ. ಅವರಿಗೆ ವೆಂಟಿಲೇಟರ್‌ಗಳು ಬೇಕು. ಇಟಲಿ, ಸ್ಪೇನ್, ಜರ್ಮನಿ ದೇಶಗಳು ವೆಂಟಿಲೇಟರ್‌ಗಳಿಗೆ ಬೇಡಿಕೆ ಇಟ್ಟಿವೆ ಎಂದು ಹೇಳಿದ್ದಾರೆ.
ಆದ ಕಾರಣ ಅಗತ್ಯವಿರುವ ದೇಶಗಳಿಗೆ ವೆಂಟಿಲೇಟರ್‌ಗಳನ್ನು ಒದಗಿಸಲು ಅಮೆರಿಕಾ ಸಿದ್ಧವಿದೆ ಎಂದು ಟ್ರಂಪ್ ತಿಳಿಸಿದ್ದಾರೆ.