ಕರ್ನಾಟಕ

karnataka

By

Published : Jul 25, 2020, 2:15 PM IST

ETV Bharat / international

ಹೊಸ ವಿದೇಶಿ ವಿದ್ಯಾರ್ಥಿಗಳು ಯುಎಸ್​ಗೆ ಬರುವಂತಿಲ್ಲ: ಅಮೆರಿಕ ಹೊಸ ನೀತಿ ಘೋಷಣೆ

ಈಗಾಗಲೇ ದಾಖಲಾಗದಿರುವ ಹೊಸ ವಿದ್ಯಾರ್ಥಿಗಳು ಕೋರ್ಸ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಲು ಬಯಸಿದರೆ ಅವರಿಗೆ ವೀಸಾಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅಮೆರಿಕ ಸರ್ಕಾರ ತಿಳಿಸಿದೆ.

us college
us college

ವಾಷಿಂಗ್ಟನ್: ತಮ್ಮ ತರಗತಿಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಲು ಯೋಜಿಸಿರುವ ಹೊಸ ವಿದೇಶಿ ವಿದ್ಯಾರ್ಥಿಗಳು ಅಮೆರಿಕವನ್ನ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಫೆಡರಲ್ ವಲಸೆ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲಿನ ಹೊಸ ನಿರ್ಬಂಧಗಳನ್ನು ಅಧಿಕಾರಿಗಳು ರದ್ದುಪಡಿಸಿದ್ದರು.

ಕಾಲೇಜು ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ, ಈಗಾಗಲೇ ದಾಖಲಾಗದಿರುವ ಹೊಸ ವಿದ್ಯಾರ್ಥಿಗಳು ಕೋರ್ಸ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಲು ಬಯಸಿದರೆ ಅವರಿಗೆ ವೀಸಾಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಕೊರೊನಾ ವೈರಸ್ ಪರಿಣಾಮವಾಗಿ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ತರಗತಿಗಳನ್ನು ಒದಗಿಸುವ ವಿಶ್ವವಿದ್ಯಾಲಯಗಳಿಗೆ ಸೇರ್ಪಡೆಗೊಳ್ಳುವ ಹೊಸ ವಿದ್ಯಾರ್ಥಿಗಳ ಮೇಲೆ ಈ ಪ್ರಕಟಣೆ ಪರಿಣಾಮ ಬೀರಲಿದೆ.

ಈಗಾಗಲೇ ಅಮೆರಿಕದಲ್ಲಿರುವ ಅಥವಾ ವಿದೇಶದಿಂದ ಹಿಂದಿರುಗುತ್ತಿರುವ ಮತ್ತು ಈಗಾಗಲೇ ವೀಸಾಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಅಮೆರಿಕದ ಫೆಡರಲ್ ವಲಸೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details