ಕರ್ನಾಟಕ

karnataka

ETV Bharat / international

ಮ್ಯಾನ್ಮಾರ್‌ ಮೇಲೆ ಕಠಿಣ ನಿರ್ಬಂಧದ ಎಚ್ಚರಿಕೆ ನೀಡಿದ ಅಮೆರಿಕ - ವಾಷಿಂಗ್ಟನ್

ಯುಎಸ್ ಅಧ್ಯಕ್ಷ ಜೋ ಬೈಡನ್ ಮ್ಯಾನ್ಮಾರ್ ಮೇಲೆ ಇತ್ತೀಚಿನ ದಂಗೆಗೆ ಸಂಬಂಧಿಸಿದಂತೆ ಮತ್ತೆ ನಿರ್ಬಂಧಗಳನ್ನು ವಿಧಿಸಬಹುದು ಎಂದು ಹೇಳಿದ್ದಾರೆ.

Biden
ಜೋ ಬೈಡನ್

By

Published : Feb 2, 2021, 9:31 AM IST

ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸೋಮವಾರ ಮ್ಯಾನ್ಮಾರ್ ಮೇಲೆ ಇತ್ತೀಚಿನ ದಂಗೆಗೆ ಸಂಬಂಧಿಸಿದಂತೆ ಮತ್ತೆ ನಿರ್ಬಂಧಗಳನ್ನು ವಿಧಿಸಬಹುದು ಎಂದು ಹೇಳಿದ್ದಾರೆ.

ಬರ್ಮಾದಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಳ್ಳುವುದು, ಆಂಗ್ ಸಾನ್ ಸೂಕಿ ಮತ್ತು ಇತರ ನಾಗರಿಕ ಅಧಿಕಾರಿಗಳ ಬಂಧನ ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವುದು ದೇಶದ ಪ್ರಜಾಪ್ರಭುತ್ವ ಮ್ತತು ಕಾನೂನು ನಿಯಮದ ಮೇಲೆ ನಡೆದ ನೇರ ಆಕ್ರಮಣವಾಗಿದೆ ಎಂದು ಬೈಡನ್ ತಮ್ಮ​ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾಪ್ರಭುತ್ವದ ಪ್ರಗತಿಯನ್ನು ಆಧರಿಸಿ ಕಳೆದೊಂದು ದಶಕದಲ್ಲಿ ಅಮೆರಿಕ ಮ್ಯಾನ್ಮಾರ್‌ ಮೇಲೆ ಹೇರಿದ್ದ ನಿರ್ಬಂಧಗಳನ್ನು ತೆಗೆದುಹಾಕಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಇಚ್ಛಾಶಕ್ತಿಯನ್ನು ಮೀರಿಸಲು ಅಥವಾ ವಿಶ್ವಾಸಾರ್ಹ ಚುನಾವಣೆಯ ಫಲಿತಾಂಶವನ್ನು ಅಳಿಸಲು ಪ್ರಯತ್ನಿಸಬಾರದು. ಸುಮಾರು ಒಂದು ದಶಕದಿಂದ ಮ್ಯಾನ್ಮಾರ್ ಜನರು ಚುನಾವಣೆಗಳು, ನಾಗರಿಕ ಆಡಳಿತ ಮತ್ತು ಅಧಿಕಾರದ ಶಾಂತಿಯುತ ವರ್ಗಾವಣೆಯನ್ನು ಸ್ಥಾಪಿಸಲು ಸ್ಥಿರವಾಗಿ ಕೆಲಸ ಮಾಡುತ್ತಿದ್ದಾರೆ. ಆ ಪ್ರಗತಿಯನ್ನು ಗೌರವಿಸಬೇಕು ಎಂದು ಜೋ ಬೈಡನ್​ ಸೂಚನೆ ಕೊಟ್ಟಿದ್ದಾರೆ.

ABOUT THE AUTHOR

...view details